ಮಹಾರಾಷ್ಟ್ರ: ಸೆಂಟ್ರಲ್ನಿಂದ ಗುಜರಾತ್ ನ ಗಾಂಧಿನಗರಕ್ಕೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಎಮ್ಮೆಗಳ ಹಿಂಡು ಅಡ್ಡ ಬಂದ ಕಾರಣ ಅಪಘಾತ ಸಂಭವಿಸಿದೆ. ಇಅದರಿಂದ ಇಂಜಿನ್ನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ಪಶ್ಚಿಮ ರೈಲ್ವೆಯ ಎಸ್ಆರ್ಒ, ಜೆಕೆ ಜಯಂತ್ ಹೇಳಿದ್ದಾರೆ.
ಗೈರತ್ಪುರ-ವತ್ವಾ ನಿಲ್ದಾಣದ ನಡುವೆ 11:18 ಕ್ಕೆ ಈ ಘಟನೆ ಸಂಭವಿಸಿದೆ. ಮುಂಬೈ-ಗಾಂಧಿನಗರ ವಂದೇ ಭಾರತ್ ಮಾರ್ಗದಲ್ಲಿ ಎಮ್ಮೆಗಳು ಏಕಾಏಕಿ ಅಡ್ಡ ಬಂದಿದ್ದು, ಎಫ್ಆರ್ಪಿಯ ಇಂಜಿನ್ ಭಾಗಕ್ಕೆ ಹಾನಿಯಾಗಿದೆ. ಎಮ್ಮೆಗಳು ಸಾವನ್ನಪ್ಪಿದ್ದು, ಅದನ್ನು ತೆಗೆದ ನಂತರ ರೈಲು ತನ್ನ ಓಡಾಟವನ್ನು ಮುಂದುವರಿಸಿದೆ.