ಪ್ರಯಾಣಿಕರ ಟೆಂಪೋ ಪಲ್ಟಿ: ಓರ್ವ ಸಾವು, 12 ಜನರಿಗೆ ಗಾಯ

ಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಟೆಂಪೋವೊಂದು ಪಲ್ಟಿಯಾದ ಘಟನೆ ತಾಲೂಕಿನ ಖರ್ವಾ ಕ್ರಾಸ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಜಲವಳ್ಳಿ ಕರ್ಕಿಯ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.