ಒಂದೇ ದಿನದಲ್ಲಿ 1 ಕೋಟಿ ವೀವ್ಸ್ ಪಡೆದ ‘ಗಂಧದ ಗುಡಿ’ ಟ್ರೇಲರ್.!

ಯೂಟ್ಯೂಬ್​ನಲ್ಲಿ ‘ಗಂಧದ ಗುಡಿ’ ಟ್ರೇಲರ್​ ಧೂಳೆಬ್ಬಿಸುತ್ತಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 1 ಕೋಟಿ ಬಾರಿ ವೀಕ್ಷಣೆ ಕಂಡು ಸೆನ್ಸೇಷನ್​ ಸೃಷ್ಟಿ ಮಾಡಿದೆ.

ಸದ್ಯ ಟ್ರೇಲರ್​ ನೋಡಿರುವ ಅಭಿಮಾನಿಗಳ ಮನದಲ್ಲಿ ಭಾರಿ ಕೌತುಕ ಮೂಡಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅ. 9 ರಂದು ‘ಗಂಧದ ಗುಡಿ’ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ​. ಪುನೀತ್​ ರಾಜ್​ಕುಮಾರ್​ ಕನಸಿನ ಪ್ರಾಜೆಕ್ಟ್​ ಗಂಧದ ಗುಡಿ ಅ. 28 ರಂದು ಎಲ್ಲೆಡೆ ಬಿಡುಗಡೆ ಆಗಲಿದೆ.

ಇಡೀ ಡಾಕ್ಯುಮೆಂಟರಿ ಮೂಡಿಬಂದ ಝಲಕ್​ ಈ ಟ್ರೇಲರ್​ ಮೂಲಕ ಅಡಕವಾಗಿದ್ದು, ಟ್ರೇಲರ್​ ದೃಶ್ಯಗಳನ್ನು ಕಂಡು ಫ್ಯಾನ್ಸ್​ ವಾವ್​ ಎಂದಿದ್ದಾರೆ. ಗಂಧದ ಗುಡಿ ಟ್ರೇಲರ್​ ನೋಡಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಟ್ವೀಟ್​ ಮಾಡಿದ್ದಾರೆ.