ಆಸ್ಕರ್​ ಪ್ರಶಸ್ತಿಗೆ ಆಯ್ಕೆಯಾದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ನಿಧನ

ಭಾರತದಿಂದ ಈ ವರ್ಷ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗಿರುವ ‘ಚೆಲ್ಲೋ ಶೋ’ ಸಿನಿಮಾದಲ್ಲಿ ನಟನೆ ಮಾಡಿದ್ದ ಬಾಲ ನಟ ರಾಹುಲ್​ ಕೊಲಿ ಬದುಕು ಕೊನೆಯಾಗಿದೆ. ಕ್ಯಾನ್ಸರ್​ ಎಂಬ ಮಹಾಮಾರಿ ರೋಗದಿಂದ ರಾಹುಲ್ ಕೊನೆಯುಸಿರೆಳೆದಿದ್ದಾನೆ. ಈತನ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.

ಚಿತ್ರ ಬಿಡುಗಡೆ ಆಗಲು ಇನ್ನು ಕೆಲವೇ ದಿನ ಇರುವಾಗ ನಿಧನವಾಗಿದ್ದು, ಚಿತ್ರತಂಡದವರು ಸಂತಾಪ ಸೂಚಿಸಿದ್ದಾರೆ. ಅ. 2 ರಂದು ರಾಹುಲ್​ ಕೊಲಿ ರಕ್ತ ವಾಂತಿ ಮಾಡಿಕೊಂಡಿದ್ದ. ನಂತರ ಜ್ವರ ಕಾಣಿಸಿಕೊಂಡಿದ್ದು, ಬಳಿಕ ಆತ ಸವನ್ನಪ್ಪಿದ್ದಾನೆ. ಇದರಿಂದ ಆತನ ಇಡೀ ಕುಟುಂಬ ದುಃಖತಪ್ತವಾಗಿದೆ.

ಮಗನಿಲ್ಲದ ನೋವಿನಲ್ಲೇ ಅ.14 ರಂದು ‘ಚೆಲ್ಲೋ ಶೋ’ ಚಿತ್ರ ನೋಡುವುದಾಗಿ ಆತನ ಕುಟುಂಬದವರು ತಿಳಿಸಿದ್ದಾರೆ. ರಾಹುಲ್​ ತಂದೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್​ ಆದ ಬಳಿಕ ನಮ್ಮ ಬದುಕು ಬದಲಾಗುತ್ತದೆ ಎಂದು ಹೇಳಿದ್ದ ಮಗನ ಮಾತನ್ನು ನೆನಪಿಸಿಕೊಂಡು ತಂದೆ ಕಣ್ಣೀರಿಡುತ್ತಿದ್ದಾರೆ.