ಮತ್ತೊಮ್ಮೆ ವಿವಾದ ಸೃಷ್ಟಿಸಿದ ಕಮಲ್ ಹಾಸನ್.!

ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಹಿಂದು ಪದವನ್ನು ಸೃಷ್ಟಿಸಿಕೊಂಡಿದ್ದು ಅಷ್ಟೇ ಎಂದು ಬಹುಭಾಷಾ ನಟ ಕಮಲ್‌ಹಾಸನ್‌ ಹೇಳಿದ್ದಾರೆ. ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ ಎಂದು ತಮಿಳು ನಿರ್ದೇಶಕ ವೆಟ್ರಿಮಾರನ್‌ ಹೇಳಿಕೆಯನ್ನು ಸಮರ್ಥಿಸುವ ವೇಳೆ ಕಮಲ್ ಹಾಸನ್‌ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ.

ರಾಜ ರಾಜ ಚೋಳನ ಚರಿತ್ರೆ ಆಧರಿಸಿದ, ಖ್ಯಾತ ನಿರ್ದೇಶನ ಮಣಿರತ್ನಂ ಅವರ ಐತಿಹಾಸಿಕ ಚಿತ್ರ ‘ಪೊನ್ನಿಯನ್‌ ಸೆಲ್ವನ್‌’ ಬಿಡುಗಡೆಯಾದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ವೆಟ್ರಿಮಾರನ್‌, ನಮ್ಮ ಹೆಗ್ಗುರುತುಗಳನ್ನು ಒಂದಾದ ಮೇಲೊಂದರಂತೆ ನಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ. ಮೊದಲು ತಿರುವಳ್ಳುವರ್‌ ಅವರನ್ನು ಕೇಸರೀಕರಣಗೊಳಿಸುವ ಅಥವಾ ರಾಜ ರಾಜ ಚೋಳನನ್ನು ಹಿಂದೂ ಎಂದು ಕರೆಯುವ ರೀತಿಯ ಘಟನೆಗಳು ಪದೇಪದೇ ನಡೆಯುತ್ತಿವೆ ಎಂದು ಹೇಳಿದ್ದರು

ವೆಟ್ರಿಮಾರನ್‌ ಹೇಳಿಕೆಗೆ ಬೆಂಬಲ ನೀಡಿ ಪ್ರತಿಕ್ರಿಯೆ ನೀಡಿದ ಕಮಲ್‌ ಹಾಸನ್‌ ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ವೈನವಂ, ಶಿವಂ ಮತ್ತು ಸಮನಂ ಮಾತ್ರ ಇತ್ತು. ಹಿಂದೂ ಎಂಬ ಪದವನ್ನು ಬ್ರಿಟಿಷರು ತಮ್ಮ ಲಾಭಕ್ಕಾಗಿ ಸೃಷ್ಟಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಮಲ್‌ ಹಾಸನ್‌ ಹೇಳಿಕೆಗೆ ತೀವ್ರ ಚರ್ಚೆ ನಡೆಯುತ್ತಿದೆ. 

ಇನ್ನೂ ವೆಟ್ರಿಮಾರನ್‌ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ರಾಜ ರಾಜ ಚೋಳ ಹಿಂದೂ ರಾಜನೇ ಆಗಿದ್ದ. ಅವನು ತನ್ನನ್ನು ಶಿವಪಾದ ಶೇಖರ ಎಂದು ಕರೆದುಕೊಂಡಿದ್ದ. ಹಾಗಿದ್ದರೆ ಆತ ಹಿಂದೂ ಅಲ್ಲವೇ? ಅವನು ನಿರ್ಮಿಸಿದ ಒಂದು ಚರ್ಚ್‌ ಅಥವಾ ಮಸೀದಿ ತೋರಿಸಿ ನೋಡೋಣ ಎಂದು ಹೇಳಿದ್ದಾರೆ.