ಭಾರತ್‌ ಜೋಡೋ ಯಾತ್ರೆಗೆ ಸಂಬಂಧಿಸಿದ ಬ್ಯಾನರ್ ನಲ್ಲಿ ವೀರ ಸಾವರ್ಕರ್ ಫೋಟೋ.!

ಮಂಡ್ಯ: ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆಗೆ ಸಂಬಂಧಿಸಿ ಹಾಕಿದ್ದ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಅವರ ಫೋಟೋ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.

ಶಾಂತಿನಗರ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್​ ಗೆ ಸಂಬಂಧಿಸಿದ ಬ್ಯಾನರ್​ನಲ್ಲಿ ವೀರ ಸಾವರ್ಕರ್ ಫೋಟೋ ಕಾಣಿಸಿಕೊಂಡಿರುವುದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಡು ಮಾಡಿದೆ. ಈ ಬ್ಯಾನರ್​ನಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ  ಮತ್ತು ಡಿಕೆ ಶಿವಕುಮಾರ್  ಫೋಟೋ ಕೂಡ ಇದೆ. ಈ ಬಗ್ಗೆ ಕಾಂಗ್ರೆಸ್ ಇದು ದುಷ್ಕರ್ಮಿಗಳ ಕೈವಾಡ ಎಂದು ಹೇಳಿದೆ.