ಮೈಸೂರಿನಲ್ಲಿ ಸಂಭ್ರಮದ ಜಂಬೂಸವಾರಿ: ಹಲವು ತಂಡಗಳಿಂದ ಕಲಾಪ್ರದರ್ಶನ

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿ ಅರಮನೆ ಆವರಣದಲ್ಲಿ ಸಂಭ್ರಮ ಸಡಗರಗಳಿಂದ ಆರಂಭವಾಗಿದೆ. ಕಲಾ ತಂಡಗಳಿಂದ ಕೂಡಿದ್ದ ಮೆರವಣಿಗೆಯನ್ನು ಅರ್ಜುನ ಮುನ್ನಡೆಸಿದ್ದಾನೆ.

ಸಿಎಂ ಬಸವರಾಜ ಬೊಮ್ಮಾಯಿ ಏಳು ನಿಮಿಷ ಮುಂಚೆಯೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿರು. ಕುಟುಂಬ ವರ್ಗದ ಸಮೇತ ಆಗಮಿಸಿ, ಪೂಜೆ ಸಲ್ಲಿಸಿದರು. 3.62ಕ್ಕೆ ನಿಶಾನೆ ಆನೆಯಾದ ಅರ್ಜುನನು ಮೊದಲ ಹೆಜ್ಜೆ ಇಟ್ಟು, ಸೊಂಡಿಲೆತ್ತಿ ನಮಸ್ಕರಿಸಿ, ಜಂಬೂ ಸವಾರಿ ಮುನ್ನಡೆಸಿದ್ದಾನೆ. ಬಲರಾಮ ದ್ವಾರದಿಂದ ನಿಶಾನೆ ಆನೆಯಾಗಿ ಅರ್ಜುನ ಅರಮನೆಯಿಂದ ಆಚೆ ಬರುತ್ತಿದ್ದಂತೆ ಲಕ್ಷಾಂತರ ಮಂದಿ ಜೋರು, ಶಿಳ್ಳೆ, ಜೈಕಾರ ಕೂಗಿ ಸ್ವಾಗತಿಸಿದರು.

ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು, ದೂರದ ಊರುಗಳಿಂದ, ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಬೆಳಗ್ಗೆ ಹತ್ತುಗಂಟೆಯಿಂದಲೇ ಬಿಸಿಲನ್ನೂ ಲೆಕ್ಕಿಸದೇ ಜಂಬೂಸವಾರಿ ವೀಕ್ಷಣೆಗೆ ಕಾಯ್ದು ಕುಳಿತಿದ್ದರು.