ದುಬಾರಿ ದುನಿಯಾ ಮಧ್ಯೆ ಮತ್ತೊಂದು ಬಿಗ್ ಶಾಕ್.! ನಾಳೆಯಿಂದ ವಿದ್ಯುತ್ ದರ ಹೆಚ್ಚಳ.!

ಬೆಂಗಳೂರು: ದುಬಾರಿ ದುನಿಯಾದ ನಡುವೆ ಜನರ ಬಳಿ ಸುಲಿಗೆಗೆ ನಿಂತುಬಿಡ್ತಾ ಇಂಧನ ಇಲಾಖೆ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಮತ್ತೆ ನಾಳೆಯಿಂದ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಿ ಇಂಧನ ಇಲಾಖೆ ಗ್ರಾಹಕರಿಗೆ ಹೊರೆ ಮಾಡುತ್ತಿದೆ. ರಾಜ್ಯದ ಜನತೆಗೆ ನಾಳೆಯಿಂದಲೇ ಹೊಸ ವಿದ್ಯುತ್ ದರ ಅನ್ವಯವಾಗಲಿದೆ. ಏಪ್ರಿಲ್, ಜುಲೈ ಆಯ್ತು ಇದೀಗ ಅಕ್ಟೋಬರ್ 1 ರಿಂದ ಹೆಚ್ಚುವರಿ ವಿದ್ಯುತ್ ದರ ತೆರಬೇಕಾದ ಪರಿಸ್ಥಿತಿ ಗ್ರಾಹಕರಿಗೆ ಬಂದೊದಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ನಾಳೆಯಿಂದಲೇ ಗ್ರಾಹಕರ ಮೇಲೆ ಆರ್ಥಿಕ ಹೊರೆ.!

ಪ್ರತಿ ಯೂನಿಟ್ ಮೇಲೆ 23 ಪೈಸೆಯಿಂದ 43 ಪೈಸೆಯವರಿಗೆ ಹೆಚ್ಚಿಸಿ ಕೆಇಆರ್ಸಿ ಆದೇಶ ಹೊರಡಿಸಿದೆ.

  • ನಾಳೆಯಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 43 ಪೈಸೆ ಹೆಚ್ಚುವರಿ ಶುಲ್ಕ ಕಟ್ಟಬೇಕು
  • ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ ಹಾಲಿ ಶುಲ್ಕ ದ ಮೇಲೆ 24 ಪೈಸೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು
  • ಸೆಸ್ಕಾಂ ಅಡಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ 35 ಪೈಸೆ ಏರಿಕೆ
  • ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯ ವಿದ್ಯುತ್ ಗ್ರಾಹಕರು ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚುವರಿ ವಿದ್ಯುತ್ ಶುಲ್ಕ ಕಟ್ಟಬೇಕು

ವಿದ್ಯುತ್ ಸರಬರಾಜು ಕಂಪನಿಗಳ ನಷ್ಟ ಸರಿದೂಗಿಸಲು ನಾಳೆಯಿಂದ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಕೆಇಆರ್ಸಿ ಹೇಳಿದೆ. ಹೀಗಾಗಿ ನಾಳೆಯಿಂದ ಹೊಸ ವಿದ್ಯುತ್ ದರ ಜಾರಿ ಮಾಡಲು ವಿದ್ಯುತ್ ಸರಬರಾಜು ಕಂಪನಿಗಳು ಸಿದ್ಧವಾಗಿವೆ.