ಬಾರಾಮುಲ್ಲಾದಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

ಜಮ್ಮುಕಾಶ್ಮೀರ: ಬಾರಾಮುಲ್ಲಾದಲ್ಲಿ ಶುಕ್ರವಾರ ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಯಡಿಪೋರಾ, ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದ್ದು, ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಚರಣೆ ನಡೆಸುತ್ತಿವೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಶೋಪಿಯಾನ್ ಜಿಲ್ಲೆಯ ಚಿತ್ರಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮತ್ತೊಂದು ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್ ಸ್ಥಳದಲ್ಲಿ ಶೋಧ ಕಾರ್ಯವನ್ನು ಆರಂಭಿಸಲಾಗಿದ್ದು, ಈ ವೇಳೆ 2 ಎಕೆ ಸರಣಿ ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಹಲವು ಯುದ್ಧೋಚಿತ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಶ್-ಎ-ಮೊಹಮ್ಮದ್ ಸಂಘಟನೆಯ ಸದಸ್ಯರಾದ ಕುಲ್ಗಾಮ್‌ನ ಟಾಕಿಯಾದ ಮೊಹಮ್ಮದ್ ಶಫಿ ಗನಿ ಮತ್ತು ಮೊಹಮ್ಮದ್ ಆಸಿಫ್ ವಾನಿ ಗುಂಡಿನ ಚಕಮಕಿ ನಡೆಸಿದ ಭಯೋತ್ಪಾದಕರು ಎಂದು ಪೊಲೀಸರು ಗುರುತಿಸಿದ್ದಾರೆ.

ಗ್ರಾಮದಲ್ಲಿ ಶಂಕಿತ ಮನೆಗಳ ಸಮೂಹದ ಸುತ್ತಲೂ ಸೇನೆಯು ತ್ವರಿತ ಆರಂಭಿಕ ಕಾರ್ಡನ್​ನ್ನು ಸ್ಥಾಪಿಸಿತು, ನಂತರ ಅದನ್ನು ಹೆಚ್ಚುವರಿ ಪಡೆಗಳಿಂದ ಬಲಪಡಿಸಲಾಯಿತು. ಶಂಕಿತ ಸ್ಥಳದಲ್ಲಿ ಭಯೋತ್ಪಾದಕರ ಇರುವುದನ್ನು ದೃಢಪಡಿಸಿದ ನಂತರ, ಕಾರ್ಡನ್‌ನಿಂದ ಸುರಕ್ಷಿತ ಸ್ಥಳಕ್ಕೆ ನಾಗರಿಕರನ್ನು ಸ್ಥಳಾಂತರಿಸಲಾಗಿದೆ.

ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನ್ನು ಹತ್ಯೆ ಮಾಡಲಾಗಿದೆ. ಓರ್ವ ಸೈನಿಕನಿಗೆ ಗಾಯವಾಗಿದ್ದು, ಅವಂತಿಪುರದ 439 ಫೀಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭಯೋತ್ಪಾದಕರ  ಗುಂಡಿನ ದಾಳಿಯಿಂದಾಗಿ, ಅಲ್ಲಿದ ಮನೆಗಳ ಸುತ್ತಮುತ್ತಲಿನ ಗ್ಯಾಸ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು,  ಸ್ಫೋಟ ಸಂಭವಿಸಿದೆ. ಸೈನ್ಯ ಮತ್ತು ಪೊಲೀಸರ ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ.  ನಂತರ ಮತ್ತೆ ಸೇನಾಪಡೆಗಳು ಗುಂಡಿನ ದಾಳಿ ನಡೆದು ಇನ್ನೊಬ್ಬ ಭಯೋತ್ಪಾದಕನನ್ನು ಹತ್ಯೆಗೈದಿದ್ದಾರೆ.