‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ನಲ್ಲಿ ಒಂದಕ್ಕಿಂತ ಮತ್ತೊಂದು ಡಿಫರೆಂಟ್ ಚಿತ್ರಗಳ ತಯಾರಾಗುತ್ತಿವೆ. ಈಗ ಈ ಪ್ರೊಡಕ್ಷನ್ ಹೌಸ್ನಿಂದ ಹೊಸ ಘೋಷಣೆ ಮಾಡಲಾಗಿದ್ದು, ನಿರ್ದೇಶಕ ಪವನ್ ಕುಮಾರ್ ಮತ್ತು ಮಲಯಾಳಂ ನಟ ಫಹಾದ್ ಫಾಸಿಲ್ ಕಾಂಬಿನೇಷನ್ನ ಹೊಸ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದ್ದು, ಸಿನಿಮಾದ ಟೈಟಲ್ ಅನ್ನು ಬಹಿರಂಗಪಡಿಸಿದೆ. ಹೊಸ ಚಿತ್ರಕ್ಕೆ ‘ಧೂಮಂ’ ಎಂದು ಹೆಸರು ಇಡಲಾಗಿದೆ.
ನಿರ್ದೇಶಕ ಪವನ್ ಕುಮಾರ್ ‘ಲೂಸಿಯಾ’, ‘ಯು-ಟರ್ನ್’ ರೀತಿಯ ಸಿನಿಮಾಗಳ ಮೂಲಕ ತಮ್ಮ ಸಾಮರ್ಥ್ಯ ಸ್ಯಾಂಡಲ್ ವುಡ್ ನಲ್ಲಿ ಸಾಬೀತು ಪಡಿಸಿದ್ದಾರೆ. ಈಗ ಬಹುಭಾಷಾ ನಟ ಫಹಾದ್ ಫಾಸಿಲ್ ಸಿನೆಮಾ ಮಾಡುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ.
‘ಧೂಮಂ’ ಚಿತ್ರದ ಶೂಟಿಂಗ್ ಅ. 9 ರಿಂದ ಶುರುವಾಗಲಿದ್ದು, ಫಹಾದ್ ಫಾಸಿಲ್ ಜೊತೆಗೆ ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟನೆ ಮಾಡಲಿದ್ದಾರೆ. ಈ ಚಿತ್ರವು ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರಲಿದೆ.
ಹೊಂಬಾಳೆ ಬ್ಯಾನರ್ ನಲ್ಲಿ ಶುಕ್ರವಾರ ಕಾಂತಾರ ಚಿತ್ರ ಬಿಡುಗಡೆಯಾಗಿ ಭರ್ಜರಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಸಲಾರ್, ಬಘೀರ, ರಾಘವೇಂದ್ರ ಸ್ಟೋರ್ಸ್ ಮುಂತಾದ ಸಿನಿಮಾಗಳು ಇದೇ ಬ್ಯಾನರ್ನಿಂದ ಮೂಡಿಬರುತ್ತಿವೆ. ಅದರ ಜೊತೆಗೆ ಧೂಮಂ ಮೂವಿ ಹೊಸ ಸೇರ್ಪಡೆಯಾಗಿದೆ.