ಅಮೆರಿಕದಲ್ಲಿ ರಾಕಿಂಗ್ ಸ್ಟಾರ್.! ಹಾಲಿವುಡ್ ನಲ್ಲಿ ಸಿನೆಮಾ ಮಾಡಲಿದ್ದಾರಾ.?!

ರಾಕಿಂಗ್ ಸ್ಟಾರ್ ಯಶ್ ಹಾಲಿವುಡ್​​ನ ನಿರ್ದೇಶಕನ ಜೊತೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಕುತೂಹಲ ಕಾರಣವಾಗಿದೆ.

ಯಶ್ ಹಾಲಿವುಡ್​ ನಟ ಮತ್ತು ನಿರ್ದೇಶಕ ಜೆಜೆ ಪೆರ್ರಿಯನ್ನು ಅಮೆರಿಕದ ಟರನ್ ಟೆಕ್ಟಿಕಲ್ ಇನೋವೇಶನ್ ನಲ್ಲಿ ಭೇಟಿ ಮಾಡಿದ್ದಾರೆ. ಅಲ್ಲಿ ಜೆರ್ರಿ ಜೊತೆ ಗನ್​ ಹಿಡಿದು ಶೂಟಿಂಗ್ ಮಾಡಿದ್ದಾರೆ. ಈ ಸಮಯವನ್ನು ಯಶ್ ಸಖತ್ ಎಂಜಾಯ್ ಮಾಡಿದ್ದು, ಆ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಟಾರ್ಗೆಟ್ ತಲುಪಲು ಯಾವಾಗಲೂ ಒಂದು ಮಾರ್ಗ ಇರುತ್ತದೆ. ಅದನ್ನು ಗುರುತಿಸುವುದು ಒಂದು ಚಾಲೆಂಜ್. ಧನ್ಯವಾದಗಳು ಜೆರ್ರಿ. ಎಂತಹ ಅದ್ಭುತ ದಿನ ಎಂದು ಯಶ್ ಟ್ವಿಟರ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಕೆಜಿಎಫ್​ 2 ನಲ್ಲಿ ಬಳಕೆ ಆಗಿದ್ದ ಕಲಾಶ್​ನಿಕೋವ್ ಗನ್​ ಅನ್ನು ನೆನಪಿಸಿಕೊಂಡಿದ್ದಾರೆ. ಈ ಕೇವಲ ಎರಡು ಗಂಟೆಗಳಲ್ಲಿ ಈ ವಿಡಿಯೋ 25 ಲಕ್ಷ ಬಾರಿ ವೀಕ್ಷಣೆಯಾಗಿದೆ.

ಯಶ್ ಅವರು ಜೆರ್ರಿಯನ್ನು ಭೇಟಿ ಮಾಡಿದ್ದರಿಂದ ಯಶ್ ಮುಂದಿನ ಚಿತ್ರವನ್ನು ಹಾಲಿವುಡ್ ನಲ್ಲಿ ಮಾಡಲಿದ್ದಾರೆಯೇ ಎನ್ನುವ ಅನೇಕ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಆದರೆ ರಾಕಿಂಗ್ ಸ್ಟಾರ್ ಇದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ.