ಗದಗ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನ ಮನೆ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಹತ್ತು ಸಾವಿರ ರೂ ಮೌಲ್ಯದ 600 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದ ಘಟನೆ ಗದಗ ನಗರದ ವಕೀಲ ಚಾಳದ ಬಳಿ ನಡೆದಿದೆ. ವಕೀಲ ಚಾಳದ ನಿವಾಸಿ ಕನಕಪ್ಪ ಗುಡಿಮನಿ ಬಂಧಿತ ಆರೋಪಿ.
ಈತ ಮಾರಾಟದ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸಂಗ್ರಹ ಮಾಡಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗದಗ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಮಾಲು ಸಮೇತ ವ್ಯಕ್ತಿ ಸಿಕ್ಕಿ ಬಿದ್ದಿದಾನೆ. ಅಬಕಾರಿ ಡಿಸಿ ಭರತೇಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಇನ್ನು ಈ ಬಗ್ಗೆ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.