ಭೀಕರ ಚಂಡಮಾರುತಕ್ಕೆ ತತ್ತರಿಸಿದ ಫ್ಲೋರಿಡಾ.! ಅನಾಹುತಗಳ ಸರಮಾಲೆ, ಜನ ಅತಂತ್ರ.!

ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾಕ್ಕೆ ಪ್ರಬಲ ಇಯಾನ್ ಚಂಡಮಾರುತ ಅಪ್ಪಳಿಸಿದ್ದು ದಾಖಲೆ ಮಟ್ಟದಲ್ಲಿ ಅನಾಹುತಗಳು ಸಂಭವಿಸಿವೆ. ಹಲವು ಮನೆಗಳು ನಾಶವಾಗಿದ್ದು ವಿದ್ಯುತ್ ಇಲ್ಲದೆ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಂಡಮಾರುತದ ಪರಿಣಾಮ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ.

ಅಲ್ಲದೇ ಕೀಸ್ ದ್ವೀಪದಲ್ಲಿ ದೋಣಿಯೊಂದು ಮುಳುಗಿ ಅದರಲ್ಲಿದ್ದ 20 ವಲಸಿಗರು ನಾಪತ್ತೆಯಾಗಿದ್ದು, ಮೂವರು ಈಜಿ ದಡ ಸೇರಿದ್ದಾರೆ ಎಂದು ಬಾರ್ಡರ್ ಪೆಟ್ರೋಲ್ ಹೇಳಿದೆ. ಇನ್ನು ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.

ಫ್ಲೋರಿಡಾದ ಆಡಳಿತ ಮಂಡಳಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನು ಭೀಕರ ಚಂಡಮಾರುತದ ಪರಿಣಾಮ ಅಮೆರಿಕದಲ್ಲಿ ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.