ಜಾರ್ಜಿಯಾ: ಫಿಡೆ ವಿಶ್ವ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ನ ಅಂಡರ್-8 ವಿಭಾಗದಲ್ಲಿ ಎ. ಚಾರ್ವಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬಟುಮಿಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಚಾರ್ವಿ 11 ಸುತ್ತುಗಳ ಸ್ಪರ್ಧೆಯ ಬಳಿಕ ಇಂಗ್ಲೆಂಡ್‌ನ ಬೋಧನಾ ಶಿವಾನಂದನ್‌ರನ್ನು ಹಿಂದಿಕ್ಕಿ ಗೆದ್ದಿದ್ದಾಳೆ.
ರಾಷ್ಟ್ರೀಯ ಅಂಡರ್-8 ಹಾಗೂ ಅಂಡರ್-10 ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದ ಚಾರ್ವಿ, 7 ನೇ ಸುತ್ತಿನಲ್ಲಿ ಸೋತಿದ್ದಳು. ಬಳಿಕ ಆಘಾತದಿಂದ ಚೇತರಿಸಿಕೊಂಡು ಉತ್ತಮ ಟೈ-ಬ್ರೇಕ್ ಸ್ಕೋರ್ ನಿಂದ ಬೋಧನಾ ವಿರುದ್ಧ ಮೇಲುಗೈ ಸಾಧಿಸಿದ್ದಾಳೆ.