ಉಧಂಪುರ್ ನಲ್ಲಿ 8 ಗಂಟೆಯ ಅವಧಿಯಲ್ಲಿ 2 ಬಾಂಬ್ ಸ್ಫೋಟ

ಜಮ್ಮು-ಕಾಶ್ಮೀರ: ಉಧಂಪುರ್ ನಲ್ಲಿ ಕಳೆದ 8 ಗಂಟೆಯಲ್ಲಿ ಎರಡು ಕಡೆ ಬ್ಲಾಸ್ಟ್ ಆಗಿರುವ ಘಟನೆ ಸಂಭವಿಸಿದ್ದು, ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ 10:30ಕ್ಕೆ ದೊಮೇಲಿ ಚೌಕ್​ ಬಳಿ ಇರೋ ಪೆಟ್ರೋಲ್​ ಬಂಕ್​ ಬಳಿ ಮೊದಲ ಬಾರಿಗೆ ಖಾಲಿ ಬಸ್​ನಲ್ಲಿ ಸ್ಫೋಟ ಸಂಭವಿಸಿದೆ. ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ಮತ್ತೆ ಇಂದು ಬೆಳಗ್ಗೆ ಮತ್ತೆ ಬಸ್​ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದೆ. ರಾತ್ರಿ ಬ್ಲಾಸ್ಟ್​ ಸಂಭವಿಸಿದ 4 ಕಿ.ಮೀ ದೂರದಲ್ಲೇ ಬೆಳಗ್ಗೆ ಮತ್ತೆ ಸ್ಫೋಟವಾಗಿದ್ದು, ಕಾಶ್ಮೀರ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಸಮೀಪದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಉಧಂಪುರ ಡಿಐಜಿ ಸುಲೇಮಾನ್ ಚೌಧರಿ ಹೇಳಿದ್ದಾರೆ.