ಜಮ್ಮುಕಾಶ್ಮೀರ: ಕುಲ್ಗಾಮ್ ಜಿಲ್ಲೆಯ ಅಹ್ವಾಟೂ ಗ್ರಾಮದಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಈ ಇಬ್ಬರಲ್ಲಿ ಜೈಶ್-ಎ-ಮೊಹಮ್ಮದ್ ಸದಸ್ಯ ಶಫಿ ಗನಿ ಎಂಬಾತ ಎನ್‌ಕೌಂಟರ್‌ಗೂ ಮೊದಲು ಭಾರತೀಯ ಸೇನಾಧಿಕಾರಿಯ ಜೊತೆಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಈ ಕಾರ್ಯಾಚರಣೆಯ ವೇಳೆ ಸೇನಾಧಿಕಾರಿ, ವಿಡಿಯೋ ಕರೆಯ ಮೂಲಕ ಉಗ್ರ ಶಫಿ ಗನೈಗೆ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಒಬ್ಬ ಸ್ನೇಹಿತನಂತೆ ಸುರಕ್ಷಿತವಾಗಿ ಶರಣಾಗುವ ಅವಕಾಶ ನೀಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಉಗ್ರ ಶರಣಾಗಲು ನಿರಾಕರಿಸಿದ್ದು, ಅಧಿಕಾರಿಗೆ ಗೌರವ ಕೊಟ್ಟು ಸರ್ ಎಂದು ಸಂಬೋಧಿಸಿರುವುದನ್ನು ವಿಡಿಯೋದಲ್ಲಿ ಕಂಡುಬಂದಿದೆ.
ಈ ಸಂದರ್ಭದಲ್ಲಿ ಉಗ್ರ ಗನಿ ನಾನು ಸೇನೆ ವಿರುದ್ಧ ದೀರ್ಘ ಕಾಲ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಕಾಶ್ಮೀರಿ ಜನರಿಗೆ ಭಾರತೀಯ ಸೇನೆ ನೀಡುತ್ತಿರೋ ಬೆಂಬಲದ ಬಗ್ಗೆಯೂ ಉಗ್ರ ಈ ವೇಳೆ ಮಾತನಾಡಿ ಶ್ಲಾಘಿಸಿದ್ದಾನೆ.