ನವರಾತ್ರಿ ಹಿನ್ನಲೆ ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷ ಊಟದ ಮೆನು ಬಿಡುಗಡೆಗೊಳಿಸಿದ ರೈಲ್ವೆ ಇಲಾಖೆ.!

ನವದೆಹಲಿ: ಇಂದಿನಿಂದ ಶಕ್ತಿ ದೇವತೆಯನ್ನು ಆರಾಧಿಸುವ ನವರಾತ್ರಿ ಆರಂಭಗೊಂಡಿದ್ದು ದೇಶದಾದ್ಯಂತ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಹೌದು.! ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಬ್ಬದ ಊಟ ಸವಿಯುವ ಅವಕಾಶ ಒದಗಿಸಿದೆ.

ನವರಾತ್ರಿ ಹಿನ್ನೆಲೆ ಒಂಭತ್ತು ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಹಬ್ಬದ ಊಟ ದೊರೆಯಲಿದ್ದು ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ.

ಫುಡ್ ಆನ್ ಟ್ರ್ಯಾಕ್ ಅಪ್ಲಿಕೇಶನ್‌ನಲ್ಲಿ ಅಥವಾ irctc.co.in ಇಲ್ಲವೇ 1323 ಗೆ ಕರೆ ಮಾಡಿ ವಿಶೇಷ ಊಟವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರೈಲ್ವೆ ಇಲಾಖೆಯು ಟ್ವಿಟರ್ ‌ನಲ್ಲಿ ವಿಶೇಷ ಥಾಲಿಯ ಫೋಟೊವನ್ನು ಲಗತ್ತಿಸಿ ಪೊಸ್ಟ್ ಮಾಡಿ ಈ ವಿಚಾರವನ್ನು ಹಂಚಿಕೊಂಡಿದೆ.