ರಾಣಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಲಂಡನ್ ಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು

ಲಂಡನ್‌: ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಸೋಮವಾರ ನಡೆಯಲಿದೆ. ಭಾರತದ ರಾಷ್ಷ್ರಪತಿ ದ್ರೌಪದಿ ಮುರ್ಮು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಧ್ಯಕ್ಷರನ್ನು ಯುನೈಟೆಡ್ ಕಿಂಗ್‌ಡಮ್‌ನ ಭಾರತದ ಹೈ ಕಮಿಷನರ್ ಸ್ವಾಗತಿಸಿದರು. ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಷ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 17 ರಿಂದ 19 ರವರೆಗೆ ಯುನೈಟೆಡ್ ಕಿಂಗ್‌ಡಮ್‌ಗೆ ಅಧಿಕೃತ ಪ್ರವಾಸದಲ್ಲಿರಲಿದ್ದಾರೆ.

96 ನೇ ವಯಸ್ಸಿನಲ್ಲಿ ನಿಧನರಾದ ರಾಣಿ ಎಲಿಜಬೆತ್ II ಅವರಿಗೆ ಬ್ರಿಟನ್ ವಿದಾಯ ಹೇಳುತ್ತಿದೆ. ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ರ ರಾಜ್ಯ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಮುರ್ಮು ಅವರು ಮಧ್ಯಾಹ್ನ ಬ್ರಿಟನ್‌ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಆಯೋಜಿಸಿರುವ ಸ್ವಾಗತ ಕೂಟದಲ್ಲಿ ಭಾಗವಹಿಸಲಿದ್ದಾರೆ.