ಅಧಿಕಾರವನ್ನು ಸೇವೆ ರೂಪದಲ್ಲಿ ನಿರ್ವಹಿಸಿ – ವೆಂಕಟೇಶ ನಾಯಕ‌ ಕರೆ

ಕಾರವಾರ: ಅಧಿಕಾರವನ್ನು ಸೇವೆಯ ರೂಪದಲ್ಲಿ ನಿರ್ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಕರೆ ನೀಡಿದರು. ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷ ಕಾರವಾರ ಗ್ರಾಮೀಣ ಹಾಗೂ ನಗರ ಮಂಡಲ ಸೇವಾ ಪಾಕ್ಷಿಕ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ನಮ್ಮ ದೇಶವನ್ನು ವಿಶ್ವ ಗುರುವನ್ನಾಗಿಸಲು ಮುಂದಾಗಿದ್ದಾರೆ. ಸೆ. 17 ರಿಂದ ಅ. 2 ರ ತನಕ ನಡೆಯುವ ವಿವಿಧ ಕಾರ್ಯಕ್ರಮಗಳ ಜವಾಬ್ದಾರಿ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಜಿಲ್ಲಾ ಉಪಾಧ್ಯಕ್ಷೆ ನಯನಾ ನೀಲಾವರ, ನಗರ ಸಭೆ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾ ಪ್ರಕೋಸ್ಟದ ವಿ. ಎಂ. ಹೆಗ್ಡೆ, ಮಾಧ್ಯಮ ವಕ್ತಾರ ನಾಗರಾಜ ನಾಯಕ ಉಪಸ್ಥಿತರಿದ್ದರು.