ಹೊನ್ನಾವರ: ಅಬ್ಬರದ ಮಳೆ ಹಿನ್ನಲೆ ತಾಲೂಕಿನ ಮಹಿಮೆ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಮಹಿಮೆ ಕೇರಿ ಗ್ರಾಮದ ಸಂಚಾರ ಸಂಪೂರ್ಣ ಬಂದಾಗಿದೆ. ಈ ಭಾಗದ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಸಾಹಸಪಟ್ಟು ತೆರಳುತ್ತಿದ್ದಾರೆ. ಅಲ್ಲದೇ ಕಳೆದ ಮೂರು ದಿನದಿಂದ ಸುರಿದ ಅಬ್ಬರದ ಮಳೆಗೆ ಗ್ರಾಮದ ತೋಟ, ಗದ್ದೆಗಳಲ್ಲಿ ಹಳ್ಳದ ನೀರು ಹರಿದಿದೆ.