ಬಿಜೆಪಿಗೆ ಸೇರಲು ಸಿದ್ಧರಾದ 8 ಮಂದಿ ಕಾಂಗ್ರೆಸ್ ಶಾಸಕರು.!

ಗೋವಾ: ಗೋವಾದಲ್ಲಿ ಶಾಸಕರ ಪಕ್ಷಾಂತರ ಮುಂದುವರೆದಿದ್ದು, ಕಾಂಗ್ರೆಸ್‌ನ ಎಂಟು ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ಗೋವಾ ಘಟಕ ಅಧ್ಯಕ್ಷ ಸದಾನಂದ ಶೇಟ್ ತನವಾಡೆ ಬುಧವಾರ ಹೇಳಿದ್ದಾರೆ.

ಗೋವಾ ವಿಧಾನಸಭೆಯಲ್ಲಿ 11 ಕಾಂಗ್ರೆಸ್ ನ ಶಾಸಕರಿದ್ದಾರೆ. ಇವರಲ್ಲಿ 8 ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ. ವರದಿಯ ಪ್ರಕಾರ ಶಾಸಕರಾದ ದಿಗಂಬರ್ ಕಾಮತ್, ಮೈಕಲ್ ಲೋಬೋ, ಅವರ ಪತ್ನಿ ಡೆಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೊ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಬಿಜೆಪಿ ಸೇರುತ್ತಿರುವ ಶಾಸಕರಾಗಿದ್ದಾರೆ.