ಹೊನ್ನಾವರ: ತಾಲೂಕಿನ ಕಾಸರಕೊಡ ಸಮುದ್ರ ತೀರದಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಕಡಲಾಮೆಗಳು ಮರಣ ಹೊಂದಿರುವ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದು ಕಂಡು ಬಂದಿದೆ. ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು 7 ಕ್ಕೂ ಹೆಚ್ಚು ಕಡಲಾಮೆಗಳ ದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.
ಇನ್ನು ಕೆಲವು ಕಡಮಲಾಮೆಗಳಿಗೆ ಸಮುದ್ರ ತೀರದಲ್ಲಿ ಅಂತ್ಯಕ್ರಿಯಿ ನಡೆಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕೃತಿ ವೈಪರಿತ್ಯದಿಂದ ಅಥವಾ ತಿಮಿಂಗಲಗಳ ದಾಳಿಗೆ ತುತ್ತಾಗಿ ಕಡಲಾಮೆಗಳು ಹೀಗೆ ಮರಣ ಹೊಂದಿದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಥಳಿಯ ಮೀನುಗಾರರು ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲೆಯ ಕರಾವಳಿಯ ಉದ್ದಕ್ಕೆ ಹಲವೆಡೆ ಕಡಲಾಮೆಗಳು ಸತ್ತ ಸ್ಥಿತಿಯಲ್ಲಿ ಕಳೆದೆರೆಡು ದಿನಗಳಿಂದ ಸಮುದ್ರ ತೀರಗಳಲ್ಲಿ ತೇಲಿಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಕಡಲಾಮೆಗಳ ಮರಣೋತ್ತರ ಪರೀಕ್ಷೆಯ ನಂತರ ಇದರ ಬಗ್ಗೆ ನಿಖರವಾಗಿ ಹೇಳಬಹುದು ಎಂದು ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಮೀನುಗಾರರ ಪ್ರಕಾರ ಮುಂದೆ ಯಾವುದೋ ಅಪಾಯ ಕಾದಿರುವುದರ ಮುನ್ಸೂಚನೆ ಇದು ಎನ್ನುವ ವಾಡಿಕೆ ಮಾತುಗಳು ಕೇಳಿ ಬಂದಿದೆ.