ಶಿರಸಿ ನವೆಂಬರ್ 15 : ತಾಲೂಕಿನ ಉಂಚಳ್ಳಿ ಗ್ರಾಮದ ಹೊಳೆಯ ಸಮೀಪ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಬೇಟೆಗಾರರ ಪೈಕಿ ಒರ್ವನನ್ನು ಅರಣ್ಯ ಇಲಾಖೆಯವರು ಬಂಧಿಸಿ ಜಿಂಕೆಯ ಮೃತ ದೇಹವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಂಚಳ್ಳಿ ಗ್ರಾಮದ ಗಣಪತಿ ಮಂಜುನಾಥ ಗೌಡಾ ಬಂದಿತ ಆರೋಪಿಯಾಗಿದ್ದು, ಇನ್ನುಳಿದ ಆರೋಪಿ ಉಂಚಳ್ಳಿಯ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ ನಾಯ್ಕ ತಲೆಮರೆಸಿಕೊಂಡಿದ್ದಾರೆ. ಶಿರಸಿ ವಿಭಾಗದ ಉಪಅರಣ್ಯ ಸಂರಕ್ಷಣಾದಿಕಾರಿಗಳಾದ ಡಾ. ಅಜ್ಜಯ್ಯ ಜಿ ಆರ್ ಹಾಗೂ ಉಪಅರಣ್ಯ ಸಹಾಯಕ ಸಂರಕ್ಷಣಾದಿಕಾರಿಗಳಾದ ಎಸ್ ಎಸ್ ನಿಂಗಾಣಿ ಮಾರ್ಗದರ್ಶನ ಮತ್ತು ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.