ಊರಿಗೆ ಅರಸನಾದ್ರೂ ತಾಯಿಗೇ ಮಗನೇ – ಸಂಸದರಾಗಿ ಮಧ್ಯರಾತ್ರಿ ಮನೆಗೆ ಬಂದ ಕಾಗೇರಿಯವರಿಗೆ ದೃಷ್ಟಿತೆಗೆದ ತಾಯಿ

ಶಿರಸಿ ಜೂನ್‌ 06 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಮನೆಗೆ ಬಂದ ವಿಶ್ವೇಶ್ವರ ಹೆಗಡೆ ಕಾಗೇರಿಗೆ, ಅವರ ತಾಯಿ ದೃಷ್ಟಿ ತೆಗೆದಿರುವ ವಿಡಿಯೋ ಎಲ್ಲಕ್ಕಿಂತ ತಾಯಿ ಪ್ರೀತಿಯೇ ಮಿಗಿಲು ಅನ್ನೋದನ್ನು ಸಾರಿ ಹೇಳ್ತಿದೆ…

ಊರಿಗೆ ಅರಸನಾದ್ರೂ ತಾಯಿಗೇ ಮಗನೇ… ಅಮ್ಮನ ಪ್ರೀತಿಯ ಮುಂದೆ ಯಾವ ಬಿರುದು ಬಿನ್ನಾಣಗಳು ಲೆಕ್ಕಕ್ಕೆ ಬರೋದಿಲ್ಲ. ಈ ದೃಶ್ಯ ಅದೇ ಮಮತೆಯ ಕತೆಯನ್ನೇ ಹೇಳ್ತಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆಗೆ ಸಂಸದರಾದ್ರೂ, ಅವರ ಅಮ್ಮನ ಪಾಲಿಗೆ ಮಗನೇ.. ಹೌದು… ರಾಜ್ಯದಲ್ಲೇ ಅತೀ ಹೆಚ್ಚು ಮತಗಳಿಂದ ಗೆದ್ದು ಸಂಸದರಾಗಿ ಮನೆಗೆ ಬಂದ ಕಾಗೇರಿಯವರಿಗೆ, ಅವರ ತಾಯಿ ಸರ್ವೇಶ್ವರಿ ಹೆಗಡೆ ದೃಷ್ಟಿ ತೆಗೆದಿದ್ದಾರೆ. ಕುಮಟಾದಲ್ಲಿ ಮತ ಎಣಿಕೆ ಮುಗಿದು ಕಾಗೇರಿಯವರು ಮನೆಗೆ ತಲುಪುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಮಗನ ಬರುವಿಕೆಗಾಗಿ ಕಾದು ಕುಳಿತಿದ್ದ ತಾಯಿ ಸಂತಸದಿಂದ ಬರಮಾಡಿಕೊಂಡು, ದೃಷ್ಟಿ ತೆಗೆದಿದ್ದಾರೆ…

ಇನ್ನು ಇದಕ್ಕೂ ಮುನ್ನ ಕಾಗೇರಿಯವರು ಶಿರಸಿಗೆ ಪ್ರವೇಶ ಮಾಡುತ್ತಿದ್ದಂತೆ, ಮೊದಲು ನೀಲಕೇಣಿಯಲ್ಲಿರುವ ವಿಘ್ನ ನಿವಾರಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಗಣಪತಿ ದರ್ಶನ ಪಡೆದ್ರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ಕಾಗೇರಿಯವರನ್ನು ಸನ್ಮಾನಿಸಿ ಗೌರವಿಸಿತು…