ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದ ಡಿವೈನ್‌ ಸ್ಟಾರ್ ರಿಷಬ್‌ ಶೆಟ್ಟಿ

ಹೊನ್ನಾವರ ಜೂನ್‌ 06 : ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಬಂದು ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ಭೇಟಿ ನೀಡಿ, ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದಾರೆ…

This image has an empty alt attribute; its file name is Screenshot-2024-06-06-174055-1024x514.png

ಭೂಮಿಯ ಮೇಲಿರುವ ಕೈಲಾಸವೆಂದೇ ಕರೆಸಿಕೊಂಡಿರುವ ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ಭೇಟಿ ನೀಡದವರೇ ಇಲ್ಲ. ಇದೀಗ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಕೂಡ ಸೇರ್ಪಡೆಗೊಂಡಿದ್ದಾರೆ. ಕಾಂತಾರ್‌ ಚಾಪ್ಟರ್‌ 1 ಸಿನಿಮಾದಲ್ಲಿ ಬ್ಯುಸಿಯಾಗಿದ್ರೂ, ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ರಿಷಬ್‌, ಗುರವಾರ ಗೋಕರ್ಣಕ್ಕೆ ಭೇಟಿ ನೀಡಿದ್ರು…

ಪತ್ನಿ ಪ್ರಗತಿ, ಮಗ ಮತ್ತು ಮಗಳ ಜೊತೆ ಆಗಮಿಸಿದ ರಿಷಬ್‌ ಶೆಟ್ಟಿ ಗೋಕರ್ಣ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು. ಇದೇ ವೇಳೆ ಶ್ರೀ ತಾಮ್ರ ಗೌರಿ ದೇವಾಲಯಕ್ಕೂ ತೆರಳು ಪೂಜೆ ಸಲ್ಲಿಸಿದ್ರು…

ಸದ್ಯ ಕಾಂತಾರ ಚಾಪ್ಟರ್‌ 1 ಸಿನಿಮಾದಲ್ಲಿ ರಿಷಭ್‌ ಬ್ಯುಸಿಯಾಗಿದ್ದು, ಮುಂದಿನ ವರ್ಷ ಹಬುಭಾಷೆಯಲ್ಲಿ ತೆರೆ ಕಾಣಲಿದೆ. ಈ ವೇಳೆ ಬಿಡುವು ಸಿಕ್ಕಾಗಲೆಲ್ಲ ರಿಷಭ್‌, ಪುರಾಣ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ…