ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್-ಡ್ರೆಸ್ಸಿಂಗ್​ ರೂಮ್​ ಮರೆತ ವಾರ್ನರ್​ ವಿಡಯೋ ವೈರಲ್!​

ಬಾರ್ಬಡೋಸ್‌: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್‌ ಅವರು ಇಂದು (ಗುರವಾರ) ನಡೆದ ಒಮಾನ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​ ದಾಲೆಯನ್ನು ಮುರಿದಿದ್ದಾರೆ.

ಒಮಾನ್​ ವಿರುದ್ಧ ವಾರ್ನರ್​ 51 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 56 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಇದು ವಾರ್ನರ್​ ಅವರ 111ನೇ ಟಿ20 ಅರ್ಧಶತಕ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ ಕ್ರಿಸ್​ ಗೇಲ್​ ಗೆಸರಿನಲ್ಲಿತ್ತು. ಗೇಲ್​ 110 ಅರ್ಧಶತಕ ಬಾರಿಸಿದ್ದಾರೆ.

ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ವಾರ್ನರ್​ ಟಿ20 ವಿಶ್ವಕಪ್​ ಬಳಿಕ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಲಿದ್ದಾರೆ. ಇದೇ ವರ್ಷ ನಡೆದಿದ್ದ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ಮತ್ತು ಸರಿಯಾಗಿ ಆಡುವ ಅವಕಾಶ ಸಿಗದ ವಾರ್ನರ್​ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್​ ನಡೆಸಿ ಗಮನಸೆಳೆದರು.

ಡ್ರೆಸ್ಸಿಂಗ್​ ರೂಮ್​ ಮರೆತ ವಾರ್ನರ್​

ಇದೇ ಪಂದ್ಯದಲ್ಲಿ ವಾರ್ನರ್​ ಅವರು ಔಟ್​ ಆಗಿ ತಮ್ಮ ತಂಡದ ಡ್ರೆಸ್ಸಿಂಗ್​ ರೋಮ್​ಗೆ ತೆರಳುವ ಬದಲು ಎದುರಾಳಿ ಒಮಾನ್ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ಪ್ರಸಂಗವೂ ನಡೆಯಿತು. ಮೆಟ್ಟಿಲೇರುತ್ತಾ ಒಮಾನ್​ ಡ್ರೆಸ್ಸಿಂಗ್​ ಕೋಣೆಗೆ ತೆರಳುತ್ತಿದ್ದ ವಾರ್ನರ್​ ಅವರನ್ನು ತಮ್ಮ ತಂಡದ ಸಹ ಆಟಗಾರರು ಜೋರಾಗಿ ಕರೆದು ಅದು ನಮ್ಮ ಕೊಠಡಿಯಲ್ಲ ಎಂದು ಹೇಳಿದ್ದಾರೆ. ಬಳಿಕ ವಾರ್ನರ್​ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದರು. ಇದರ ವಿಡಿಯೊ ವೈರಲ್​ ಆಗಿದೆ.