ಟಿ20 ವಿಶ್ವಕಪ್ 2024 ಜೂನ್ 2 ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ.
ಜೂನ್ 2 ರಿಂದ ಶುರುವಾಗಲಿರುವ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಈ ಇಪ್ಪತ್ತು ತಂಡಗಳಲ್ಲಿ 10 ಟೀಮ್ಗಳು ಈಗಾಗಲೇ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ತಂಡಗಳ ಜೆರ್ಸಿ ವಿನ್ಯಾಸ ಮತ್ತು ತಂಡದಲ್ಲಿರುವ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.(ಮೀಸಲು ಆಟಗಾರರು: )ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.
ಪಪುವಾ ನ್ಯೂಗಿನಿಯಾ ತಂಡ : ಅಸ್ಸಾದೊಲ್ಲಾ ವಾಲಾ (ನಾಯಕ), ಅಲಿ ನಾವೊ, ಚಾಡ್ ಸೋಪರ್, ಸಿಜೆ ಅಮಿನಿ, ಹಿಲಾ ವರೇ, ಹಿರಿ ಹಿರಿ, ಜ್ಯಾಕ್ ಗಾರ್ಡ್ನರ್, ಜಾನ್ ಕರಿಕೊ, ಕಬುವಾ ವಾಗಿ ಮೋರಿಯಾ, ಕಿಪ್ಲಿಂಗ್ ಡೊರಿಗಾ, ಲೆಗಾ ಸಿಯಾಕಾ, ನಾರ್ಮನ್ ವನುವಾ, ಸೆಮಾ ಕಮಿಯಾ, ಸೆಸೆ ಬೌ, ಟೋನಿ ಉರಾ
ಬಾಂಗ್ಲಾದೇಶ ತಂಡ : ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಝೀದ್ ಹಸನ್, ಶಕೀಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹ್ಮದ್ ಉಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ತನ್ವಿರ್ ಇಸ್ಲಾಂ, ಶಾಕ್ ಮಹೇದಿ ಹಸನ್, ರಿಶಾದ್ ಹೊಸ್ಸೌರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಂಝೀಮ್ ಹಸನ್ ಸಾಕಿಬ್.
ಉಗಾಂಡಾ ತಂಡ : ಬ್ರಿಯಾನ್ ಮಸಾಬಾ (ನಾಯಕ), ಸೈಮನ್ ಸ್ಸೆಸಾಜಿ, ರೋಜರ್ ಮುಕಾಸಾ, ಕಾಸ್ಮಾಸ್ ಕ್ಯೆವುಟಾ, ದಿನೇಶ್ ನಕ್ರಾಣಿ, ಫ್ರೆಡ್ ಅಚೆಲಮ್, ಕೆನ್ನೆತ್ ವೈಸ್ವಾ, ಅಲ್ಪೇಶ್ ರಾಮ್ಜಾನಿ, ಫ್ರಾಂಕ್ ನ್ಸುಬುಗಾ, ಹೆನ್ರಿ ಸೆನ್ಯೊಂಡೋ, ಬಿಲಾಲ್ ಹಸುನ್, ರಾಬಿನ್ಸನ್ ಒಬುಯಾ, ರಿಯಾಝತ್ ಅಲಿ, ಜುಮಾ ಮಿಯಾಜಿ, ರೋನಕ್ ಪಟೇಲ್
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.
ಅಫ್ಘಾನಿಸ್ತಾನ್ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್ ಉಲ್ ಹಕ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್.
ಸೌತ್ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ , ರೀಝ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ರಿಯಾನ್ ರಿಕೆಲ್ಟನ್, ಕಗಿಸೊ ರಬಾಡ , ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ , ಜಾರ್ನ್ ಫೋರ್ಚುಯಿನ್, ಜೆರಾಲ್ಡ್ ಕೊಟ್ಝಿಯ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ , ಒಟ್ನಿಯೆಲ್ ಬಾರ್ಟ್‌ಮ್ಯಾನ್.
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ.
ನ್ಯೂಜಿಲ್ಯಾಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.
ಶ್ರೀಲಂಕಾ ತಂಡ : ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ, ಕುಸಲ್ ಮೆಂಡಿಸ್, ಪಾತುಂ ನಿಸ್ಸಂಕಾ, ಕಮಿಂದು ಮೆಂಡಿಸ್, ಸದೀರ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶಾನಕ, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ನುಶ್ಮಂತ ಚಮೀರ, ಮಥೀಶ ಪತಿರಾಣ, ದಿಲ್ಶನ್ ಮಧುಶಂಕ.