PL 2024 RCB vs CSK: ಐಪಿಎಲ್ನ 68ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸಿಎಸ್ಕೆ ಸೋತರೂ ಪ್ಲೇಆಫ್ಗೆ ಪ್ರವೇಶಿಸಬಹುದು. ಇದಕ್ಕಾಗಿ ಸಿಎಸ್ಕೆ ತಂಡವು ಆರ್ಸಿಬಿ ತಂಡವನ್ನು 10 ಎಸೆತಗಳು ಬಾಕಿಯಿರುವಂತೆ ಗೆಲ್ಲುವಂತೆ ಮಾಡಿದರೆ ಸಾಕು. ಅಥವಾ 17 ರನ್ಗಳಿಗಿಂತ ಕಡಿಮೆ ಅಂತರದಿಂದ ಸಿಎಸ್ಕೆ ತಂಡ ಸೋತರೂ ಆರ್ಸಿಬಿ ತಂಡ ಪ್ಲೇಆಫ್ನಿಂದ ಹೊರಬೀಳಲಿದೆ.
ಐಪಿಎಲ್ನ (IPL 2024) ರಣರೋಚಕ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ಗೆ ಪ್ರವೇಶಿಸಲಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಏಕೆಂದರೆ ಸಿಎಸ್ಕೆ ತಂಡವು +0.528 ನೆಟ್ ರನ್ ರೇಟ್ನೊಂದಿಗೆ ಒಟ್ಟು 14 ಅಂಕಗಳನ್ನು ಹೊಂದಿದೆ. ಇದೇ ವೇಳೆ ಆರ್ಸಿಬಿ ತಂಡದ ನೆಟ್ ರನ್ ರೇಟ್ +0.387 ಇದ್ದು, 12 ಅಂಕಗಳನ್ನು ಹೊಂದಿದೆ.
ಅಂದರೆ ಇಲ್ಲಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ 14 ಅಂಕಗಳನ್ನು ಕಲೆಹಾಕಿದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲೂ ಹಿಂದಿಕ್ಕಬೇಕಿದೆ. ಇದಕ್ಕಾಗಿ ಸಿಎಸ್ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿಯಿರುವಂತೆ ಚೇಸ್ ಮಾಡಬೇಕು. ಇಲ್ಲ ಕನಿಷ್ಠ 18 ರನ್ಗಳಿಂದ ಭರ್ಜರಿ ಜಯ ಸಾಧಿಸಬೇಕು. ಅಂದರೆ ಮಾತ್ರ ಆರ್ಸಿಬಿ 14 ಅಂಕಗಳೊಂದಿಗೆ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಪ್ಲೇಆಫ್ಗೆ ಪ್ರವೇಶಿಸಬಹುದು.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿ ತಂಡವನ್ನು 10 ಎಸೆತಗಳು ಬಾಕಿಯಿರುವಂತೆ ಗೆಲ್ಲುವಂತೆ ಮಾಡಿದರೂ ಪ್ಲೇಆಫ್ಗೆ ಅವಕಾಶ ಪಡೆಯಲಿದೆ. ಹಾಗೆಯೇ 18 ಕ್ಕಿಂತ ಕಡಿಮೆ ರನ್ಗಳ ಅಂತರದಿಂದ ಸಿಎಸ್ಕೆ ತಂಡ ಸೋತರೂ ಪ್ಲೇಆಫ್ಗೆ ಪ್ರವೇಶಿಸಲಿದೆ. ಅಂದರೆ ಈ ಪಂದ್ಯದಲ್ಲಿ ಸಿಎಸ್ಕೆ ತಂಡ ಸೋತರೂ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ಹೊಂದಿರಲಿದೆ.
ಹೀಗಾಗಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಬೇಕು. ಅಥವಾ ಕನಿಷ್ಠ 18 ರನ್ಗಳಿಗಿಂತ ಅಂತರದಿಂದ ಗೆಲ್ಲಬೇಕು. ಈವರಡೂ ಸಾಧ್ಯವಾಗದೇ ಆರ್ಸಿಬಿ ತಂಡ ಗೆದ್ದರೂ, ಸಿಎಸ್ಕೆ ತಂಡ ಪ್ಲೇಆಫ್ಗೆ ಎಂಟ್ರಿ ಕೊಡುವುದು ಖಚಿತ.