ಶಿರಸಿ : ನಗರದಲ್ಲಿ ಅತಿ ವೇಗ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ನಗರ ಠಾಣಾ ವ್ಯಾಪ್ತಿಯ ಬನವಾಸಿ ರಸ್ತೆಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ ಹಮ್ಮಿಕೊಂಡು ಪಿಎಸ್‌ಐ ನಾಗಪ್ಪ ಬಿ ಅತಿವೇಗವಾಗಿ ವಾಹನ ಚಲಾತಿಸುತ್ತಿದ್ದ ಮೂವರು ವಾಹನ ಸವಾರರ ವಿರುದ್ಧ ಭಾರತೀಯ ಮೊಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ೩ ಸಾವಿರ ರೂ. ದಂಡ ವಿಧಿಸಿದ್ದಾರೆ.
ಡಿಎಸ್ಪಿ ಗಣೇಶ ಕೆ.ಎಲ್, ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್‌ಐ ಗಳಾದ ನಾಗಪ್ಪ.ಬಿ, ಮಹಾಂತಪ್ಪ ಕುಂಬಾರ, ಹೊಸ ಮಾರುಕಟ್ಟೆ ಠಾಣಾ ಪಿಎಸ್‌ಐಗಳಾದ ರತ್ನಾ ಕುರಿ, ರಾಜಕುಮಾರ ಉಕ್ಕಲಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿರಸಿ ನಗರಸಭಾ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ ೪೦ ಕಿ.ಮೀ ಹಾಗೂ ಮಾರುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಗಂಟೆಗೆ ೩೫ ಕಿ.ಮೀ ನಿಗದಿಪಡಿಸಲಾಗಿದ್ದು, ಅತಿವೇಗ ಮತ್ತು ನಿರ್ಲಕ್ಷದಿಂದ ವಾಹನ ಚಲಾಯಿಸುವ ಸವಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಡಿಎಸ್ಪಿ ಗಣೇಶ.ಕೆ.ಎಲ್ ಎಚ್ಚರಿಕೆ ನೀಡಿದ್ದಾರೆ.