ಬೆಂಗಳೂರು: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಇದರಿಂದ ನಗರದ ಬಹುತೇಕ ಐಟಿ-ಬಿಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಿದೆ. ಆದರೆ ಇನ್ನೂ ಮಳೆಯ ಪ್ರಮಾಣ ಕಡಿಮೆಯಾಗದ ಹಿನ್ನೆಲೆ ಮುಂದಿನ ವಾರವೂ ವರ್ಕ್ ಫ್ರಂ ಹೋಂ ಮುಂದುವರೆಸುವ ಬಗ್ಗೆ ಚಿಂತನೆ ಮಾಡುತ್ತಿದೆ.
ನಗರದ 500 ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳಿಗೆ ಮಳೆ ನೀರು ನುಗ್ಗಿ ಅವಾಂತರವಾಗಿದ್ದು, ವಿವಿಧ ಐಟಿ ಕಂಪನಿಗಳು ಸೆ. 5 ರಿಂದ ವರ್ಕ್ ಹೋಂ ನೀಡಿದೆ. ಕಂಪನಿಗಳೊಗೆ ನೀರು ನುಗ್ಗಿ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಮಳೆ ನೀರಿಗೆ ಆಹುತಿಯಾಗಿದೆ. ಅಲ್ಲದೇ ಸರ್ವರ್ ಸಮಸ್ಯೆ ಎದುರಾಗಿದ್ದು, ಕೋಟ್ಯಾಂತರ ರೂ. ನಷ್ಟವಾಗಿದೆ. ನಷ್ಟದ ಅಂಕಿ-ಅಂಶ ಕುರಿತು ಮುಂದಿನ ವಾರ ಸಭೆ ನಡೆಯಲಿದೆ.
ಆ. 30 ರಂದು ಮಳೆ ಸುರಿದ ಪರಿಣಾಮ ಸುಮಾರು 225 ಕೋಟಿ ರೂ. ನಷ್ಟ ಸಂಭವಿದೆ ಎನ್ನಲಾಗಿದೆ. ಸದ್ಯ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಿದ್ದ ಹಿನ್ನೆಲೆ ಕೆಲಸಕ್ಕೆ ಯಾವುದೇ ತೊಂದರೆ ಆಗಿಲ್ಲ. ಆದರೆ ಬೆಲೆ ಬಾಳುವ ಕಂಪ್ಯೂಟರ್ ಹಾಗೂ ಇನ್ನಿತರೆ ಸಾಮಾಗ್ರಿಗಳು ಹಾನಿಗೊಳಗಾಗಿದೆ. ನಷ್ಟ ಖಚಿತ ಕುರಿತ ಮಾಹಿತಿ ಮುಂದಿನ ವಾರ ಸಿಗಲಿದ್ದು, 1 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.