ಬೆಳಗಾವಿ: ಹೆಸ್ಕಾಂ ಪರೀಕ್ಷೆಯ ಕಿರಿಯ ಸಹಾಯಕರ ಹುದ್ದೆಗೆ ನಡೆದಿದ್ದ ಪರೀಕ್ಷಾ ಅಕ್ರಮ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಶಿರಹಟ್ಟಿ ಬಿ.ಕೆ. ಗ್ರಾಮದ ಬೀರಪ್ಪ ಲಕ್ಷ್ಮಣ ಹಣಗಂಡಿ (24), ಗೋಕಾಕ ತಾಲೂಕಿನ ಅರಭಾವಿ ಪಟ್ಟಣದ ಶಿವಾನಂದ ದುಂಡಪ್ಪ ಹಳ್ಳೂರ (23) ಬಂಧಿತ ಆರೋಪಿಗಳು. ಬಂಧಿತರಿಂದ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಪೊಲೀಸರು ವಶಪಡಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ಬಂಧಿತ ಬೀರಪ್ಪ ಖಾಸಗಿ ಕೆಲಸ ಮಾಡುತ್ತಿದ್ದು, ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ಹೆಸ್ಕಾ ಪರೀಕ್ಷೆಯಲ್ಲಿ ಅಕ್ರಮ ನಡೆಯಲು ಪ್ರಶ್ನೆಗಳಿಗೆ ಪ್ರಿಂಟ್ ತೆಗೆಯಲು ಲ್ಯಾಪಟಾಪ್ ತಂದಿದ್ದಲ್ಲದೇ ಸ್ಮಾರ್ಟ್ ವಾಚ್ ಖರೀದಿ ಮಾಡಿದ್ದ ಎಂದು ತಿಳಿದುಬಂದಿದೆ.
ಮತ್ತೊಬ್ಬ ಆರೋಪಿ ಅರಭಾವಿಯ ಶಿವಾನಂದ ಹಳ್ಳೂರ ಈತ ಪರೀಕ್ಷೆ ಬರೆಯಲು ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಬಂಧಿತರಿಂದ 5 ಮೊಬೈಲ್ ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ತಿಳಿಸಿದ್ದಾರೆ.