ಬೆಂಗಳೂರು: ಜಲಮಂಡಳಿ ಪಂಪಿಂಗ್ ಸ್ಟೇಶನ್ ನಲ್ಲಿ ನೀರು ನುಗ್ಗಿರುವ ಕಾರಣದಿಂದ ಅರ್ಧ ಬೆಂಗಳೂರಿಗೆ ನೀರು ಸರಬರಾಜು ಕಡಿತಗೊಳಿಸಲಾಗಿದೆ. ಹೀಗಾಗಿ ಇಂದು ಮತ್ತೆ ನಾಳೆ ಅರ್ಧ ಬೆಂಗಳೂರಿಗೆ ನೀರು ಸರಬರಾಜು ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾವೇರಿ 3 ಹಾಗೂ 4 ನೇ ಹಂತದ ನೀರು ಸರಬರಾಜು ಯಂತ್ರಗಳು ನೀರಿನಲ್ಲಿ ಮುಳುಗಡೆಯಾಗಿದ್ದು ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಸಮಸ್ಯೆ ಎದುರಾಗಲಿದೆ. ಪ್ರತಿದಿನ ಟಿಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1450 MLD ನೀರು ಸರಬರಾಜು ಆಗುತ್ತಿತ್ತು. ಆದರೆ ನಿನ್ನೆ ರಾತ್ರಿ ಸೇರಿದಂತೆ 600 MLD ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 MLD ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆ ಇದೆ
ಯಾವೆಲ್ಲಾ ಭಾಗದಲ್ಲಿ ನೀರು ಸರಬರಾಜು ಇರುವುದಿಲ್ಲ.?
ಯಶವಂತಪುರ, ಮಲ್ಲೇಶ್ವರ, ಓಕಳಿಪುರ, ಸಂಜಯ್ ನಗರ, ಸದಾಶಿವ ನಗರ, ಆರ್ ಎಂವಿ, ಆರ್ ಟಿ ನಗರ, ಜಿಕೆವಿಕೆ, ಚಿಕ್ಕಪೇಟೆ, ಮೆಜೆಸ್ಟಿಕ್, ಶಿವಾಜಿನಗರ, ಫ್ರೇಜರ್ ಟೌನ್, ಡಿಜೆ ಹಳ್ಳಿ, ಕೋಲ್ಸ್ ಪಾರ್ಕ್, ಟ್ಯಾನರಿ ರೋಡ್, ಇಂದಿರಾ ನಗರ, ಹಲಸೂರು, ಮಲ್ಲಸಂದ್ರ ಬಂಗಲಗುಂಟೆ, ದಾಸರಹಳ್ಳಿ, ನಂದಿನಿ ಲೇಔಟ್, ಆರ್ ಆರ್ ನಗರ, ಕೆಂಗೇರಿ, ಮಹದೇವಪುರ, ಹೆಚ್ ಎಸ್ ಆರ್ ಲೇಔಟ್, ಮಂಗಮ್ಮನ ಪಾಳ್ಯ, ಜೆಪಿ ನಗರ, ಶ್ರೀನಿವಾಸ ನಗರ, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಬ್ಯಾಡರಹಳ್ಳಿ, ಶಿರ್ಕೆ, ಮೈಸೂರು ರಸ್ತೆ, ನಾಯಂಡಹಳ್ಳಿ, ಕಾಮಾಕ್ಷಿಪಾಳ್ಯ, ಮೂಡಲಪಾಳ್ಯ, ಕೊಡಿಗೆಹಳ್ಳಿ, ಕೋಗಿಲು, ಹೆಚ್ ಆರ್ ಬಿಆರ್ ಲೇಔಟ್ ಸೇರಿದಂತೆ ಅರ್ಧ ಬೆಂಗಳೂರಿಗೆ ಇಂದು ಹಾಗೂ ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.