ಕುಣಬಿ ಭವನದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರು ಗೌರವಾರ್ಪಣಾ ಸಮಾರಂಭ

ಜೋಯಿಡಾ: ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆಗ ಬದುಕು ಇನ್ನೂ ಚೆಂದ. `ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತೂ ನಮ್ಮಲ್ಲಿದೆ. ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನು ಆಚರಿಸುವ ಮೂಲಕ ನಾವೆಲ್ಲರೂ ಶಿಕ್ಷಕರಿಗೆ ನೀಡುವ ಗೌರವ ನೀಡಬೇಕು ಎಂದು ಶಾಸಕ ಅರ್.ವಿ.ದೇಶಪಾಂಡೆ ಹೇಳಿದರು.

ಅವರು ಸೋಮವಾರ ಜೊಯಿಡಾ ಕುಣಬಿ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರು ಗೌರವಾರ್ಪಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿಲಾಯಿತು. ಬಳಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಜೊತೆಗೆ ಶಿಕ್ಷಕರ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರಶಸ್ತಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಅರುಣ ಕಾಮ್ರೇಕರ, ಮಾಜಿ ಜಿ.ಪಂ ಸದಸ್ಯ ರಮೇಶ ನಾಯ್ಕ, ಕಾಳಿ ಬ್ರೀಗೇಡ್ ಸಂಚಾಲಕ ರವಿ ರೇಡ್ಕರ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬಗಾರ, ತಾ.ಪಂ ಇಓ ಆನಂದ ಬಡಕುಂದ್ರಿ, ಬಿಇಒ ಶೇಖ್ ಬಶಿರ್ ಅಹ್ಮದ ಮುಂತಾದವರು ಉಪಸ್ಥಿತರಿದ್ದರು.