ದಾಂಡೇಲಿ: ದಾಂಡೇಲಿ ನಗರದಲ್ಲಿ ಪ್ರತಿಷ್ಠಾಪಿಸಿದ ಯಕ್ಷಗಾನ ಗಣಪತಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ವನಶ್ರೀ ನಗರದ ರವಿ ಶಾನಭಾಗ ಎನ್ನುವರು ಪ್ರತಿವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಾರೆ. ಇವರು ಕಳೆದ ಹದಿನೈದು ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಬಾರಿ ಗಣೇಶೋತ್ಸವಕ್ಕೆ ಕರಾವಳಿ ಕಲೆಯಾದ ಯಕ್ಷಗಾನದ ವೇಷದಲ್ಲಿ ಗಣೇಶನ ಮೂರ್ತಿಯನ್ನು ಮಣ್ಣು, ಕಟ್ಟಿಗೆ, ಬಟ್ಟೆಗಳನ್ನು ಬಳಸಿ ತಯಾರಿಸಿದ್ದರು. ಇವರು ತಯಾರಿಸಿದ ಯಕ್ಷಗಾನ ಗಣಪನ ಮೂರ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.