ಶಿರಸಿಯ ಅತ್ಯುತ್ತಮ ಸಾರ್ವಜನಿಕ ‘ಗಣಪತಿ’ಗೆ ಫೋಟೋಗ್ರಾಫರ್ ಅಸೋಸಿಯೇಷನ್ ನಿಂದ ಪ್ರಶಸ್ತಿ

ಶಿರಸಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಿರಸಿ ತಾಲೂಕಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸುವ ಅತ್ಯುತ್ತಮ ಗಣಪತಿ ಹಾಗೂ ಅತ್ಯುತ್ತಮ ಕಲಾಕೃತಿಗೆ ನೀಡುವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಅತ್ಯುತ್ತಮ ಕಲಾಕೃತಿಯ ಪ್ರಥಮ ಸ್ಥಾನವನ್ನು ಝೂ ಸರ್ಕಲ್ ಗಣೇಶೋತ್ಸವ ಸಮಿತಿ ಪಡೆದಿದ್ದು, ದ್ವಿತೀಯ ಬಹುಮಾನವನ್ನು ಮಾರಿಕಾಂಬ ಯುವಕ ಮಂಡಳಿ ಪಡೆದಿದೆ. ಅದೇ ರೀತಿ ಮಂಗಲ ಮೂರ್ತಿಯ ಅತ್ಯುತ್ತಮ ಗಣಪತಿ ವಿಗ್ರಹ ಪ್ರಶಸ್ತಿಯ ಪ್ರಥಮ ಬಹುಮಾನವನ್ನು ದೇವಿಕೆರೆ ಗಜಾನನೋತ್ಸವ ಮಂಡಳಿ ಹಾಗೂ ದ್ವಿತೀಯ ಬಹುಮಾನವನ್ನು ಗಣೇಶ್ ನಗರದ ಗಣೇಶೋತ್ಸವ ಸಮಿತಿ ಪಡೆದಿದೆ.

ತೃತೀಯ ಬಹುಮಾನವನ್ನು ಹನುಮಗಿರಿ ಹಾಗೂ ಮರಾಠಿಕೊಪ್ಪದ ಮಹಾರಾಜ ಗಣಪತಿಯೂ ಪಡೆದಿದೆ. ಇವರಿಗೆ ರವಿವಾರ ಬಹುಮಾನ ಬಂದ ಗಣಪತಿಯ ಎದುರು ಪ್ರಶಸ್ತಿ ನೀಡಲಾಗುವುದು ಎಂದು ಅಧ್ಯಕ್ಷ ರಾಜು ಕಾನಸೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.