ಚಾಮರಾಜಪೇಟೆ ಮೈದಾನದ ವಿವಾದ ವಿವಾದವಾಗೇ ಉಳಿಯಿತು – ಮುತಾಲಿಕ್

ಧಾರವಾಡ: ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಆದೇಶ ನೀಡಿದೆ. ಆ‌ದೇಶವನ್ನು ನಾವು ಸ್ವೀಕಾರ ಮಾಡ್ತೆವೆ. ಆದರೆ‌ ಈ ಸಮಸ್ಯೆ ಸಮಸ್ಯೆಯಾಗೇ ಉಳಿಯಿತು‌. ವಿವಾದ ವಿವಾದವಾಗಿ ಉಳಿಯಿತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಇಲ್ಲಿ ದಾರಿ ತಪ್ಪಿಸುವ ವಾದ ನಡೆದಿದೆ. ಇದು ವಕ್ಫ್ ಬೋರ್ಡ್ ಗೆ ಸಂಬಂಧವೇ ಇರಲಿಲ್ಲ. ಏಕಾಏಕಿ ವಕ್ಫ್ ಬೋರ್ಡ್ ಎಂಟ್ರಿಯಾಗಿ ಸುಪ್ರೀಂ ಕೋರ್ಟ್ ಗೆ ದಾರಿ ತಪ್ಪಿಸುವ ವಾದ ಮಂಡಿಸಿ, 1991 ರ ಪ್ರಕಾರ ಯಥಾಸ್ಥಿತಿ ಕಾಪಾಡುವ ವಾದ ಮಂಡಿಸಿದ್ದಾರೆ ಎಂದರು.

ಇದು ಕಾಂಗ್ರೆಸ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕಾಂಗ್ರೆಸ್ ಕುತಂತ್ರ‌. ಇವರಿಗೆ ಸೌಹಾರ್ದ ಬೇಡ ಶಾಂತಿ ಬೇಡ. ವಕ್ಫ್ ಬೋರ್ಡ್ ಹಾಗೂ ಜಮೀರ್ ಅಹ್ಮದ ವಿವಾದ ಮಾಡಿ ಇಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರಣ ಎಂದರು.