ವೈದ್ಯನ ಕೈಲಿ ಅರಳಿದ ಗಣಪ

ಶಿರಸಿ: ಪ್ರಸಿದ್ಧ ವೈದ್ಯ, ಯಲ್ಲಾಪುರ ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಅವರು ಸ್ವತಃ ತಾವೇ ಗಣಪತಿ ಸಿದ್ಧಪಡಿಸಿದ್ದು ಸುಂದರವಾಗಿ ಮೂಡಿಬಂದಿದೆ. ಡಾ ನರೇಂದ್ರ ಪವಾರ್ ಕಳೆದ 16-17 ವರ್ಷಗಳಿಂದ ಶಿರಸಿಯ ಅವರ ಮನೆಯಲ್ಲಿ ಪ್ರತಿ ವರ್ಷ ಗಣಪತಿಯ ಮೂರ್ತಿಯನ್ನು ಮಣ್ಣಿನಿಂದ ಮಾಡುತ್ತಿದ್ದಾರೆ. ಈ ಸಲ ಸಂಪೂರ್ಣ ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ನೈಸರ್ಗಿಕ ಬಣ್ಣ ಬಳಸಿ ಸಿದ್ಧಪಡಿಸಿದ್ದಾರೆ.

ಈ ಮೂರ್ತಿಯ ರಚನೆಗೆ 15 ದಿನಗಳ ಅವಧಿ ಬೇಕಾಗಿದೆ. ಅವರ ಕರ್ತವ್ಯದ ನಂತರ ಬಿಡುವಿನ ಸಮಯದಲ್ಲಿ ರಾತ್ರಿ 9-11 ರವರೆಗೆ ಈ ಮೂರ್ತಿಯನ್ನು ರಚಿಸಿದ್ದಾರೆ. ಇವರಿಗೆ ಮಾರ್ಗದರ್ಶನವನ್ನು ಸುರೇಶ್ ಪೂಜಾರಿಯವರು ನೀಡಿದ್ದಾರೆ.