ಬೆಂಗಳೂರು: ಡಿಪೋ ಮ್ಯಾನೇಜರ್ ಕಿರುಕುಳದಿಂದಲೇ ನಾನು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಡೆತ್ ನೋಟ್ ಬರೆದಿಟ್ಟು ಬಿಎಂಟಿಸಿ ಬಸ್ ಡ್ರೈವರ್ ಹೊಳೆ ಬಸಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಆರ್ ಆರ್ ನಗರ ಡಿಪೋದಲ್ಲಿ ನಡೆದಿದೆ.
ಮೃತನ ಪೋಸ್ಟ್ ಮಾರ್ಟಂ ಮಾಡುವ ವೇಳೆ ಡೆತ್ ನೋಟು ಸಿಕ್ಕಿದ್ದು, ರಜಾ ಮತ್ತು ನಾನಾ ಕಾರಣಗಳಿಂದ ಡಿಪೋ ಮ್ಯಾನೇಜರ್ ನನಗೆ ಕಿರುಕುಳ ನೀಡ್ತಿದ್ರು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಪತಿಯ ಸಾವಿಗೆ ಡಿಪೋ ಮ್ಯಾನೇಜರ್ ಕಿರುಕುಳವೇ ಕಾರಣ ಎಂದು ಮೃತನ ಪತ್ನಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮ್ಯಾನೇಜರ್ ವಿರುದ್ಧ ದೂರು ನೀಡಿದ ಹಿನ್ನೆಲೆ ಮೃತನ ಪತ್ನಿಗೆ ಕೇಸ್ ಹಿಂಪಡೆಯುವಂತೆ ಬಿಎಂಟಿಸಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಅಲ್ಲದೇ ಅಧಿಕಾರಿಗಳ ವಿರುದ್ಧ ದೂರು ನೀಡಿದ್ರೆ ಯಾವುದೇ ಪರಿಹಾರ ಬರೋದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.