ಹೊನ್ನಾವರ : ತಾಲೂಕಿನ ಗೇರುಸೊಪ್ಪ ಭಾಗದಲ್ಲಿ ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಿನ್ನಲೆ ಶುಕ್ರವಾರ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲಿಕರಿಗೆ ದಂಡ ವಿಧಿಸಿದರು.
ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮುಂದಿನ ದಿನದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದರು.
ಈ ವೇಳೆ ತಾಲೂಕ ಆರೊಗ್ಯಧಿಕಾರಿ ಡಾ ಉಷಾ ಹಾಸ್ಯಗಾರ, ಆರೊಗ್ಯ ಶಿಕ್ಷಣಾಧಿಕಾರಿ ಆನಂದ ಶೇಟ್, ಹಿರಿಯ ಆರೋಗ್ಯ ನಿರೀಕ್ಷಕಾಧಿಕಾರಿ ಚಿದಾನಂದ ಎಸ್ ಹಾಗೂ ತಹಶೀಲ್ದಾರ ಕಛೇರಿ ಸಿಬ್ಬಂದಿಗಳು, ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿ ಹಾಗು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.