ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸರಸ್ವತಿ ವಿದ್ಯಾ ಕೇಂದ್ರದ ಮಕ್ಕಳು

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.

ಸುಚಿತ ನಾಯ್ಕ 100 ಮತ್ತು 400 ಮೀ ಓಟದಲ್ಲಿ ಪ್ರಥಮ, ಪನ್ನಗ ಗೌಡ 200 ಮೀ ಓಟದಲ್ಲಿ ಪ್ರಥಮ, ನಿತಿನ ನಾಗೇಕರ 600 ಮೀ ಓಟದಲ್ಲಿ ಪ್ರಥಮ, ಪನ್ನಗ ಗೌಡ ಎತ್ತರ ಜಿಗಿತ ಪ್ರಥಮ, ಅಗಸ್ತ್ಯ ನಾಯ್ಕ ಚೆಸ್ ಪ್ರಥಮ, ಎಚ್.ಎಂ ಶ್ರೀರಕ್ಷಾ 100 ಮೀ ಹಾಗೂ 200 ಮೀ ಓಟದಲ್ಲಿ ಪ್ರಥಮ, ಪ್ರಿಯಾ ಗೌಡ 400 ಮೀ ಓಟ ಹಾಗೂ ಗುಂಡು ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ಯೋಗಾಸನದಲ್ಲಿ ವಿಜಯ ಪಟಗಾರ ಹಾಗೂ ಸಾಯಿಶ್ ದಿನೇಶ ನಾಯ್ಕ ಪ್ರಥಮ, ಬಾಲಕಿಯರ ಯೋಗಾಸನ ಯುಕ್ತಾ ಗೌಡ ಹಾಗೂ ದಿಕ್ಷಾ ಭಟ್ಟ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಲೋಹಿತ ಗುಂಡು ಎಸೆತದಲ್ಲಿ ದ್ವಿತಿಯ, ಶ್ರೇಯಾ ಪಟಗಾರ 600 ಮೀ ಮತ್ತು 400 ಮೀ ಓಟದಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ.

ಗುಂಪು ಸ್ಪರ್ಧೆಗಳಾದ ಬಾಲಕರ ರಿಲೇ ಪ್ರಥಮ, ಬಾಲಕರ ಕಬಡ್ಡಿ ಪ್ರಥಮ, ಬಾಲಕಿಯರ ರಿಲೇ ಪ್ರಥಮ, ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕರ ವಾಲಿಬಾಲ್ ದ್ವಿತಿಯ, ಬಾಲಕರ ಖೋಖೋ ದ್ವಿತಿಯ, ಬಾಲಕಿಯರ ಥ್ರೋಬಾಲ್ ನಲ್ಲಿ ದ್ವಿತಿಯ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.