ಗಂಗಾವತಿ ನಗರಸಭೆಯ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಶಿರಸಿ ನಗರಸಭೆಗೆ ಅಧ್ಯಯನ ಪ್ರವಾಸ

ಶಿರಸಿ: ನಗರಸಭೆಯ ಕಾರ್ಯ ವೈಖರಿ, ಸ್ವ-ಸಹಾಯ ಸಂಘಗಳಿಗೆ ನೀಡುವ ಉತ್ತೇಜನ ಕುರಿತಂತೆ ಅಧ್ಯಯನ ನಡೆಸಲು ಗಂಗಾವತಿ ನಗರಸಭೆ ವತಿಯಿಂದ ಅಲ್ಲಿಯ ಸ್ವ-ಸಹಾಯ ಸಂಘಗಳ ಸದಸ್ಯರು ಶಿರಸಿ ನಗರಸಭೆಗೆ ಶುಕ್ರವಾರ ಭೇಟಿ ನೀಡಿದರು. ಗಂಗಾವತಿಯ 15 ಕ್ಕೂ ಅಧಿಕ ಸ್ವ ಸಹಾಯ ಸಂಘಗಳ 30 ಕ್ಕೂ ಅಧಿಕ ಸದಸ್ಯರು ಈ ಭೇಟಿಯಲ್ಲಿ ಭಾಗಿಯಾಗಿದ್ದರು.

ನಗರದ ಗೃಹ ಕೈಗಾರಿಕೆ, ಗಂಧದ ಮಾಲೆಗಳ ತಯಾರಿಕೆ, ಚಿಪ್ಸ್ ತಯಾರಿಕೆ ನಡೆಸುವ ಸ್ವ ಸಹಾಯ ಸಂಘಗಳೊಂದಿಗೆ ನಗರಸಭೆಯ ಸಂಬಂಧ, ನಗರಸಭೆಯಿಂದ ನೀಡಲಾಗುವ ಉತ್ತೇಜನದ ಬಗ್ಗೆ ಈ ಸದಸ್ಯರು ಅಧ್ಯಯನ ನಡೆಸಿದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ ಹಾಗೂ ಇತರರು ಮಾಹಿತಿ ನೀಡಿದರು.

ಉಡುಪಿ, ಭದ್ರಾವತಿ ಮತ್ತು ಶಿರಸಿ ನಗರಸಭೆಯಲ್ಲಿ ನಾವು ಅಧ್ಯಯನ ನಡೆಸುತ್ತಿದ್ದೇವೆ. ಶಿರಸಿ ನಗರಸಭೆ ಗೃಹೋದ್ಯಮಕ್ಕೆ ನೀಡುತ್ತಿರುವ ಉತ್ತೇಜನ ಉತ್ತಮವಾಗಿದೆ.

– ಕಾಂತಮ್ಮ ಸಿ ಒ, ಗಂಗಾವತಿ ನಗರಸಭೆ ಅಧಿಕಾರಿ