ದಾಂಡೇಲಿ: ಅಂಬಿಕಾನಗರ ಗ್ರಾ.ಪಂ ವ್ಯಾಪ್ತಿಯ ಕುಳಗಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ನಾಗಜರಿ ಸಭಾಭವನದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ತಹಸೀಲ್ದಾರ್ ಶೈಲೇಶ್ ಪರಮಾನಂದ್ ಅಧ್ಯಕ್ಷತೆಯಲ್ಲಿ ಜರುಗಿತು. ಆರೋಗ್ಯ ತಪಾಸಣೆ, ಆಧಾರ್ ತಿದ್ದುಪಡಿ, ಚುನಾವಣಾ ಗುರುತಿನ ಚೀಟಿಗೆ ಆಧಾರ್ ನೋಂದಣಿ, ಪಡಿತರ ಚೀಟಿ ತಿದ್ದುಪಡಿ ಕಾರ್ಯವನ್ನು ಸ್ಥಳದಲ್ಲಿಯೇ ಮಾಡಲಾಯಿತು.
ಒಟ್ಟು – 31 ಅರ್ಜಿಗಳು ಸ್ವೀಕೃತಿ ಆಗಿದ್ದು, 6 ಕಂದಾಯ ಇಲಾಖೆಯ ಅರ್ಜಿ ವಿಲೇವಾರಿಗೊಳಿಸಲಾಯಿತು. ಉಳಿದ 25 ಅರ್ಜಿಗಳ ವಿವರ ಈ ರೀತಿ ಇದೆ.
ಕಂದಾಯ ಇಲಾಖೆ – 03
ಗ್ರಾಮ ಪಂಚಾಯತ -11
ಹೆಸ್ಕಾಂ – 03
ಅರಣ್ಯ – 06
ಶಿಕ್ಷಣ – 02
ಒಟ್ಟು ಬಾಕಿ – 25
ಗ್ರಾಮ ಪಂಚಾಯತ್ ಸದಸ್ಯರಾದ ಕ್ಲೇಮೆಂಟ್ ಕ್ರಿಷ್ಟೋಫರ್, ಮುರಳಿ ಗೌಡ ಹಾಗೂ ಬೋಮ್ಮಿ ತಾಟೇ, ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಹಾಳಮ್ಮನವರ್, ಉಪ ವಲಯ ಅರಣ್ಯಧಿಕಾರಿ ವಿಶ್ವನಾಥ್ ಅರಬಗೊಂಡ
ಸೇರಿದಂತೆ ಶಿಕ್ಷಣ, ತೋಟಗಾರಿಕೆ, ಕೃಷಿ, ಅಬಕಾರಿ, ಪಶು, ಕೆಎಸ್ಆರ್ಟಿಸಿ, ಲೋಕೋಪಯೋಗಿ, ಪಂಚಾಯತ ರಾಜ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು