ಕುಮಟಾ ‘ಹವ್ಯಕ’ದಲ್ಲಿ ಆ. 28 ರಂದು ‘ಶೂರ್ಪನಖಾ ವಿವಾಹ’ ಮತ್ತು ‘ಕಾರ್ತವೀರ್ಯ’ ಯಕ್ಷಗಾನ ಪ್ರದರ್ಶನ

ಕುಮಟಾ: ಇಲ್ಲಿನ ಯಕ್ಷಗಾನ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಶೂರ್ಪನಖಾ ವಿವಾಹ ಮತ್ತು ಕಾರ್ತವೀರ್ಯ ಯಕ್ಷಗಾನ ಪ್ರದರ್ಶನಗಳು ಆ. 28 ರಂದು ಸಂಜೆ 4 ಗಂಟೆಯಿಂದ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗವತ ಯಲ್ಲಾಪುರ ಮತ್ತು ಚಂಡೆವಾದಕರಾಗಿ ಗಜಾನನ ಹೆಗಡೆ ಸಾಂತೂರು ಕಾರ್ಯನಿರ್ವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ ಇವರು ಕಾರ್ತವೀರ್ಯ, ತೋಟಿಮನೆ ಗಣಪತಿ ಹೆಗಡೆ ಇವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಲಾವಿದರಾಗಿ ಅಶೋಕ್ ಭಟ್ ಸಿದ್ದಾಪುರ, ಈಶ್ವರ್ ಭಟ್ ಅಂಸಳ್ಳಿ, ಶ್ರೀಧರ ಭಟ್ ಕಾಸರಕೋಡು, ನಾಗೇಂದ್ರ ಮೂರೂರು, ಮತ್ತು ವಿನಾಯಕ ಭಟ್ ಬಂಡಿವಾಳ ಇವರುಗಳು ಭಾಗವಹಿಸುವರು. ಸ್ತ್ರೀ ವೇಷಧಾರಿಗಳಾಗಿ ಸದಾಶಿವ ಭಟ್ ಮಳವಳ್ಳಿ ಮತ್ತು ಮಾರುತಿ ಬೈಲಗದ್ದೆ ಪಾಲ್ಗೊಳ್ಳಲಿದ್ದಾರೆ. ಅಪರೂಪದ ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.