ಹೊನ್ನಾವರ: ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಜನಸ್ನೇಹಿ ಅಧಿಕಾರಿ ಎಂದು ಪ್ರಶಂಸೆಗೆ ಒಳಗಾಗಿದ್ದ ಆನಂದಮೂರ್ತಿ ಅವರಿಗೆ ಸಿಪಿಐ ಐಎಸ್‌ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಮೂಲತಃ ಚಾಮರಾಜನಗರದ ಗುಂಡ್ಲಪೇಟೆ ಮೂಲದವರಾಗಿದ್ದ ಆನಂದಮೂರ್ತಿ ಪಿಎಸ್‌ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಆರಂಭಿಸಿ, ಜಿಲ್ಲೆಯ ಗೋಕರ್ಣ, ಹೊನ್ನಾವರ, ಹಳಿಯಾಳದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪಿಎಸ್‌ಐ ಆಗಿ ಜನಸಾಮಾನ್ಯರೊಂದಿಗೆ ಪ್ರೀತಿ ವಿಶ್ವಾಸದಿಂದ ಗುರುತಿಸಿಕೊಂಡಿದ್ದರು.
ಜಿಲ್ಲೆಯಾದ್ಯಂತ ಎಲ್ಲರಿಗೂ ಚಿರಪರಿಚಿತರಾಗಿದ್ದ ಇವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಬಡ್ತಿ ಹೊಂದಿದ್ದರು. ಜಿಲ್ಲೆಯ ಹಲವು ಠಾಣೆಯಲ್ಲಿಯಲ್ಲಿ ಕರ್ತವ್ಯ ನಿರ್ವಹಿಸಿರುವುದರಿಂದ ಅಲ್ಲಿಯ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಾಗಿದ್ದರು. ಇವರ ಸೇವೆ ಮುಂದಿನ ದಿನದಲ್ಲಿ ಜಿಲ್ಲೆಗೆ ಮತ್ತೊಮ್ಮೆ ದೊರೆಯುವಂತಾಗಲಿ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.



