ಹೊನ್ನಾವರ ಠಾಣೆಯಲ್ಲಿ ಪಿ.ಎಸ್.ಐ ಆಗಿದ್ದ ಶಶಿಕುಮಾರ್ ಲೋಕಾಯುಕ್ತಕ್ಕೆ

ಹೊನ್ನಾವರ: ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕುಮಾರ್ ಸಿ. ಆರ್ ಹಾಗೂ ಆನಂದಮೂರ್ತಿ ಪೊಲೀಸ್ ಇಲಾಖೆಯಲ್ಲಿ ಪದೋನ್ನತಿ ಹೊಂದಿದ್ದಾರೆ.

ಶಶಿಕುಮಾರ ಅವರು ಲೋಕಾಯುಕ್ತಕ್ಕೆ ನೇಮಕವಾಗಿದ್ದಾರೆ. ಹೊನ್ನಾವರದಲ್ಲಿ ಕಳೆದ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜಿಲ್ಲೆಯ ಚಿತ್ತಾಕುಲ, ಮಲ್ಲಾಪುರ, ಕುಮಟಾ, ಶಿರಸಿ ಮಾರ್ಕೆಟ್, ಹೊನ್ನಾವರದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷದಿಂದ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿರುವಂತೆ ನೋಡಿಕೊಂಡಿದ್ದಾರೆ.