“ಹೊನ್ನಾವರ ಪ್ರಕೃತಿಯ ಮಡಿಲಿನ ರತ್ನ” – ಆನಂದ್ ಮಹೀಂದ್ರಾ ಮನಗೆದ್ದ ಶರಾವತಿ ಹಿನ್ನೀರು

ಬೆಂಗಳೂರು: ಖ್ಯಾತ ಉದ್ಯಮಿ “ಮಹೀಂದ್ರಾ ಗ್ರೂಪ್’ ಮುಖ್ಯಸ್ಥ ಆನಂದ್ ಮಹೀಂದ್ರಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಮತ್ತು ಹಿನ್ನೀರಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದಾರೆ. ತಮ್ಮ “ಎಕ್ಸ್’ ಖಾತೆಯಲ್ಲಿ ಕರಾವಳಿಯ ಈ ಪುಟ್ಟ ಪಟ್ಟಣದ ಹಿನ್ನೀರಿನ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿರುವ ಅವರು, “ಪ್ರಕೃತಿಯ ಮಡಿಲಿನಲ್ಲಿ ಬಚ್ಚಿಟ್ಟಿರುವ ರತ್ನ ಹೊನ್ನಾವರ’ ಎಂದು ಹಾಡಿ ಹೊಗಳಿದ್ದಾರೆ.

ಹೊನ್ನಾವರ, ಅಸ್ಪೃಶ್ಯ ಸ್ವರ್ಗ

ಜೋಗ್ ಫಾಲ್ಸ್‌ನಲ್ಲಿ ಭೋರ್ಗರೆದು ಹರಿಯುವ ಅದೇ ಶರಾವತಿ ನದಿ, ಕೊನೆಗೆ ಹೊನ್ನಾವರದಲ್ಲಿ ಅತ್ಯಂತ ಶಾಂತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೊನ್ನಾವರ ಒಂದು ಮಾಂತ್ರಿಕ ಭೂದೃಶ್ಯವಾಗಿದೆ ಎಂಬುದಂತೂ ಸ್ಪಷ್ಟ’ ಎಂದು ಬರೆದುಕೊಂಡಿದ್ದಾರೆ.

ಕೇರಳದ ಹಿನ್ನೀರಿಗೆ ಪೈಪೋಟಿ ನೀಡುವಂತಿರುವ ಹೊನ್ನಾವರದ ವಿಶಿಷ್ಟ ಕಾಂಡ್ಲಾ ವನಗಳು ಮತ್ತು ಪರಿಸರ ಮಹತ್ವವನ್ನು ಶ್ಲಾಘಿಸಿ ಅವರು ಮಾಡಿರುವ ಎಕ್ಸ್ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ. ‘ಇಲ್ಲಿನ ಕಾಂಡ್ಲಾ ವನಗಳು, ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತೆ ಹೊಳೆಯುವ ಹಿನ್ನೀರು ಅದ್ಭುತವಾಗಿದೆ.