ವಿಶ್ವ ಪರಿಸರ ದಿನಾಚರಣೆ: ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಚಿಣ್ಣರ ಅರ್ಥಪೂರ್ಣ ಪ್ರಾತ್ಯಕ್ಷಿಕೆ

ಹೊನ್ನಾವರ:

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ಹೊನ್ನಾವರದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಿಶ್ವ ಪರಿಸರ ದಿನಾಚರಣೆಗೆ ಚಿಣ್ಣರ ಅರ್ಥಪೂರ್ಣ ಪ್ರಾತ್ಯಕ್ಷಿಕೆ


ಚಿಣ್ಣರು ತಾವೇ ತಯಾರಿಸಿದ ಅರಣ್ಯದ ಮಹತ್ವವನ್ನು ಸಾರುವ ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಮರಗಳನ್ನು ಕಷ್ಟಪಟ್ಟು ಬೆಳೆಸುವುದು, ಎಲ್ಲರಿಗೂ ಉಪಯೋಗವಾದ ಕಾಡನ್ನು, ಕೆಲವು ಸ್ವಾರ್ಥಿಗಳು ತಮ್ಮ ಅನುಕೂಲತೆಗೋಸ್ಕರ ನಾಶ ಮಾಡುವುದು ಮತ್ತು ಇದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

ಗೈಡ್ಸ್ ಮುಖ್ಯಸ್ಥರಾದ ಶ್ರೀಮತಿ ಮುಕ್ತ ಮಡಿವಾಳ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರುಗಳು, ವಿದ್ಯಾರ್ಥಿಗಳು ಪಾಲಕರು, ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಯಶವಂತ್ ಮೇಸ್ತ್ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜನರಲ್ಲಿ ಪರಿಸರದ ಮಹತ್ವವನ್ನು ತಿಳಿಸುವಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿತ್ತು.