ಭಟ್ಕಳ:
ಹನುಮಾನನಗರದ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಾನನಗರದ ಹಳೆ ವಿದ್ಯಾರ್ಥಿಗಳಿಂದ 2025-26 ನೇ ಸಾಲಿನಲ್ಲಿ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ರೂಪದಲ್ಲಿ ಟ್ರ್ಯಾಕ್ ಪ್ಯಾಂಟ್ ಹಾಗೂ ಶರ್ಟ್ ನ್ನು ವಿತರಿಸಲಾಯಿತು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಹಾಗೂ ಸರಕಾರಿ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ 2025-26 ನೇ ಸಾಲಿನಲ್ಲಿ ಹನುಮಾನನಗರದ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಿದ ಮೊತ್ತವನ್ನು ಬಳಸಿ ಹಾಗೂ ಊರಿನ ಹಾಗೂ ಹಳೆ ವಿದ್ಯಾರ್ಥಿಗಳ ಧನದ ಸಹಕಾರದಿಂದ ಊರಿನ ಶಾಲಾ ಮಕ್ಕಳಿಗೆ ಉತ್ತಮ ಸಮವಸ್ತ್ರವನ್ನು ಒದಗಿಸಬೇಕು ಅನ್ನುವ ಇಚ್ಛೆಯಿಂದ ಈ ಕಾರ್ಯಕ್ರಮ ನಡೆಸಿರುವುದು ಮಾದರಿ ಕೆಲಸವಾಗಿದೆ.

ಕಾರ್ಯಕ್ರಮವನ್ನು ಭಟ್ಕಳದ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಹಾಗೂ ನೂತನವಾಗಿ ಆಯ್ಕೆಯಾದ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ ನಾಯ್ಕ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹೆಚ್ ಪಿ ನಾಯ್ಕ, ಶಿಕ್ಷಕ ವಿಲ್ಸನ್ ರೋಡ್ರಿಗ್ರಿಸ, ಊರಿನ ಉದ್ಯಮಿ ವಿಠ್ಠಲ ನಾಯ್ಕ, ಗುತ್ತಿಗೆದಾರರು ಲಚ್ಮಯ್ಯ ನಾಯ್ಕ, ಹನುಮಾನನಗರದ ನಾಮಧಾರಿ ಸಮಾಜದ ಅಧ್ಯಕ್ಷ ಬಾಲಚಂದ್ರ ನಾಯ್ಕ, ಶಾಲೆಯ ಎಸ್.ಡಿ.ಎಮ್.ಸಿ. ಮಾಜಿ ಅಧ್ಯಕ್ಷರಾದ ವೆಂಕಟರಮಣ ನಾಯ್ಕ ಈಶ್ವರ ನಾಯ್ಕ, ಊರಿನ ಪ್ರಮುಖರು ಭೈರಪ್ಪ ನಾಯ್ಕ, ಜಾಲಿ ಪಟ್ಟಣ ಪಂಚಾಯಿತಿಯ ಸದಸ್ಯ ರಮೇಶ ಗೊಂಡ, ಜೈ ಹನುಮಾನ ಯುವಕ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಭಿಷೇಕ ನಾಯ್ಕ, ಶಾಲೆಯ ಹಳೆ ವಿದ್ಯಾರ್ಥಿಗಳಾದ ವಿನೋದ ನಾಯ್ಕ ವಿಘ್ನೇಶ ನಾಯ್ಕ, ಶಿವರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
