ಶ್ರೀ ರಾಮಕ್ಷತ್ರಿಯ ಮಹಾಸತಿ ಯುವಕ ಸಂಘ ಕಾಯಿತ್ಲಕೇರಿ ಕುದ್ರಿಗಿ ಇವರ ಆಶ್ರಯದಲ್ಲಿ ಹಗ್ಗ ಜಗ್ಗಾಟ

“ಶಕ್ತಿ, ಸಹಕಾರ ಮತ್ತು ಸಂಕಲ್ಪ… ಇವು ಒಂದಾಗುವ ಕ್ಷಣವೇ ನಿಜವಾದ ಜಯದ ದಾರಿ!”

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/TGmVRamLggc?si=eBbPWrI15_nKNr9g

ಶ್ರೀ ರಾಮಕ್ಷತ್ರಿಯ ಮಹಾಸತಿ ಯುವಕ ಸಂಘ ಕಾಯಿತ್ಲಕೇರಿ ಕುದ್ರಿಗಿ ಇವರ ಆಶ್ರಯದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರಥಮ ವರ್ಷದ ತಾಲೂಕಾ ಮಟ್ಟದ ಹಾಗೂ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕುದ್ರಿಗಿಯಲ್ಲಿ ಇದೆ ದಿನಾಂಕ ಏಪ್ರಿಲ್ 11, ಶನಿವಾರದಂದು ಆಯೋಜಿಸಲಾಗಿದೆ..

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/TGmVRamLggc?si=eBbPWrI15_nKNr9g

ಹೌದು.. ಅಡವಿಯ ನಡುವಿನ ಪುಟ್ಟ ಸ್ವರ್ಗಕ್ಕೆ ಸಮಾನ ಶರಾವತಿ ನದಿಯ ವಿಹಂಗಮ ನೋಟ ಮತ್ತು ಸುಂದರ ಪರಿಸರ… ಶರಾವತಿ ನದಿಯ ಮೇಲೆ ತೂಗುಯ್ಯಾಲೆಯಂತೆ ತೂಗುವ ಸೇತುವೆ… ಶರಾವತಿ ನದಿ ದಂಡೆಯಲ್ಲಿರುವ ಕುದ್ರಿಗಿ ಗ್ರಾಮದಲ್ಲಿ ಕ್ರೀಡಾ ಸಂಭ್ರಮಕ್ಕೆ ಮತ್ತೊಂದು ರಂಗು ಸೇರ್ಪಡೆಯಾಗಿದ್ದು, ಪುರುಷ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯ ಅದ್ದೂರಿ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/TGmVRamLggc?si=eBbPWrI15_nKNr9g

ಶ್ರೀ ಮಹಾಸತಿ ಯುವಕ ಸಂಘದ ವತಿಯಿಂದ ಕಳೆದ ಸುಮಾರು ವರ್ಷಗಳಿಂದ ವಿವಿಧ ಸಾಂಸ್ಕೃತಿಕ, ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಹಾಗೂ ಮಹಿಳೆಯರಿಗೂ ಕ್ರೀಡೆಯಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ಪುರುಷ ಹಾಗೂ ಮಹಿಳೆಯರ ಸರಿಸುಮಾರು 30 ರಿಂದ 40 ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 15ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 7 ಸಾವಿರ ಹಾಗೂ ಚತುರ್ಥ ಬಹುಮಾನ 5 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಪ್ರತಿಷ್ಠಿತ ಜನಪ್ರತಿನಿಧಿಗಳು ಹಾಗೂ ಸಮಾಜದಲ್ಲಿ ಮತ್ತು ನಾಡಿನಲ್ಲಿ ಗುರುತಿಸಿಕೊಂಡವರನ್ನು ಅತಿಥಿಗಳಾಗಿ ವಿಶೇಷವಾಗಿ ಆಹ್ವಾನಿಸಲಾಗಿದೆ.

ಸರಿಸುಮಾರು ಎರಡು ಸಾವಿರ ಜನರು ಕಾರ್ಯಕ್ರಮದಲ್ಲಿ ಬರುವ ನಿರೀಕ್ಷೆ ಇದ್ದು ಅವರಿಗೆ ಕೂರಲು ಗ್ಯಾಲರಿ ಮತ್ತು ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಈ ಒಂದು ಅದ್ದೂರಿ ಕ್ರೀಡಾಕೂಟಕ್ಕೆ ಸಮಸ್ತ ಸಮಾಜ ಬಾಂಧವರು, ಎಲ್ಲಾ ಊರಿನವರು ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಈ ಯಶಸ್ಸಿನ ಪ್ರಯತ್ನಕ್ಕೆ ತಾವೆಲ್ಲರೂ ಕೂಡ ಸಹಕಾರಿಯಾಗಬೇಕೆಂದು ಕುದ್ರಿಗಿ ಕಾಯಿತ್ಲಕೇರಿಯ ಶ್ರೀ ರಾಮಕ್ಷತ್ರಿಯ ಮಹಾಸತಿ ಯುವಕ ಸಂಘದವರು ತಿಳಿಸಿದ್ದಾರೆ.

ಹಗ್ಗ ಜಗ್ಗಾಟ ಸ್ಪರ್ಧೆಯ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/TGmVRamLggc?si=eBbPWrI15_nKNr9g