ಏಪ್ರಿಲ್ 21 ರಿಂದ ಏಪ್ರಿಲ್ 25ರವರೆಗೆ ಕುಳಕೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜೀರ್ಣಾಷ್ಠಬಂಧ ಕಾರ್ಯಕ್ರಮ

ಹೊನ್ನಾವರ :

ತಾಲ್ಲೂಕಿನ ಕುಳಕೋಡ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜೀರ್ಣಾಷ್ಠಬಂಧ ಕಾರ್ಯಕ್ರಮವನ್ನು ಇದೆ ಏಪ್ರಿಲ್ 21 ಮಂಗಳವಾರದಿಂದ 25 ಶನಿವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಶ್ರೀ ಗೋಪಾಲಕೃಷ್ಣ ದೇವಸ್ಥಾನವು ಬಹಳ ಪುರಾತನವಾಗಿದ್ದು, ನಿಸರ್ಗದ ಸುಂದರ ಮಡಿಲಿನಲ್ಲಿದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜೀರ್ಣಾಷ್ಠಬಂಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪರಾಭವನಾಮ ಸಂವತ್ಸರದ ಉತ್ತರಾಯಣ ವಸಂತಋತು ವೈಶಾಖ ಶುದ್ಧ ಚತುರ್ಥಿ, ಪಂಚಮಿ, ಸಪ್ತಮಿ, ಅಷ್ಟಮಿ ಮತ್ತು ನವಮಿಯ ಮಿತಿ ದಿನಾಂಕ 21-04-2026 ಮಂಗಳವಾರದಿಂದ ದಿನಾಂಕ 25-04-2026 ಶನಿವಾರದವರೆಗೆ (5ದಿನ) ವಿದ್ವಾನ್ ಶ್ರೀ ಶ್ರೀರಾಜ ಪದ್ಮನಾಭ ಭಟ್ ಗೇರುಸೊಪ್ಪ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರು ವೇ। ಮೂ॥ ಶ್ರೀ ಕೃಷ್ಣಾನಂದ ಮೋಹನ ಭಟ್ ಇವರ ದಿವ್ಯ ಪೌರೋಹಿತ್ಯದೊಂದಿಗೆ ನಡೆಯಲಿದೆ.

ದೇವಸ್ಥಾನದಲ್ಲಿ ವಿವಿಧ ಹೋಮ ಹವನಗಳು ನಡೆಯಲಿದ್ದು ದಿನಾಂಕ 21-04-2026, ಮಂಗಳವಾರದಂದು ಬೆಳಿಗ್ಗೆ 9-30 ರಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾ ಪೂಜನ, ನಾಂದಿ ಸಮಾರಾಧನೆ, ಋತ್ವಿಗ್ವರ್ಣ, ಸ್ಥಳಶುದ್ಧಿ, (ಸಂಕಲ್ಪ) ಮಧ್ಯಾಹ್ನ 1ಗಂಟೆಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ, ಸಾಯಂಕಾಲ 7ಗಂಟೆಗೆ ರಾಕ್ಷೋಘ್ನ ಹವನಗಳು ನಡೆಯಲಿದೆ.

ದಿನಾಂಕ 22-04-2026, ಬುಧವಾರ (ಪಂಚಮಿ)ಯಂದು ಬೆಳಿಗ್ಗೆ 7ಘಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳಶುದ್ಧಿ, ಯಮುನಾ ಪೂಜನ ಆಗೋಧಕ, ಯಜ್ಞಮಂಟಪ ಪ್ರವೇಶ, ದೇವತಾ ಆವಾಹನ, ಅರಣಿಮಂಥನ, ನವಗ್ರಹ ವಾಸ್ತು ಲಘುಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ರಾತ್ರಿ ಅಘೋರಾಸ್ತ್ರಹೋಮ ನಡೆಯಲಿದೆ.

ದಿನಾಂಕ 23-04-2026, ಗುರುವಾರ (ಸಪ್ತಮಿ)ಯಂದು ಬೆಳಿಗ್ಗೆ 6-30ಘಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳಶುದ್ಧಿ, (ಮಣಿಕ) ಯಮುನಾ ಪೂಜನ ಅಗೋಧಕ, ಜೀರ್ಣಾಷ್ಟಬಂಧ, ಶತಕಲಶ ಸ್ನಪನ (ಅಭಿಷೇಕ) ಕೃಷ್ಣಮೂಲಮಂತ್ರ ಹವನ, ಸಾನಿಧ್ಯ ಹವನ, ನಾರಾಯಣ ಉಪನಿಷತ್ ಹವನ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ಹಾಗೆಯೇ ಸಾಯಂಕಾಲ 5 ರಿಂದ 7ರವರೆಗೆ ಶ್ರೀ ಮಹಾಗಣಪತಿ ಭಜನಾ ಮಂಡಳಿ, ರಥಬೀದಿ, ಹೊನ್ನಾವರ ಇವರಿಂದ ಭಜನೆ ಕಾರ್ಯಕ್ರಮ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ.

ದಿನಾಂಕ 24-04-2026, ಶುಕ್ರವಾರ (ಅಷ್ಟಮಿ)ಯಂದು ಬೆಳಿಗ್ಗೆ 8ಘಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳಶುದ್ದಿ, ಯಮುನಾ ಪೂಜನ ಆಗೋಧಕ, ಪರಿವಾರ ದೇವತಾ ಕಲಾಭಿವೃದ್ಧಿ, ಗಾಯತ್ರಿಮಂತ್ರ ಹವನ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ. ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ : 25-04-2026, ಶನಿವಾರ (ನವಮಿ)ಯಂದು ಬೆಳಿಗ್ಗೆ 7ಘಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳಶುದ್ಧಿ, ಯಮುನಾ ಪೂಜನ ಆಗೋಧಕ, ಉದ್ಭರಿತ ಗಾಯತ್ರಿ ಹವನ, ಮಹಾವ್ಯಾಹೃತಿ, ಬಲಿಪ್ರದಾನ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಾರ್ಥನಾ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವೈದಿಕ ಆಶೀರ್ವಚನ ನಡೆಯಲಿದೆ. ರಾತ್ರಿ ಶ್ರೀ ದೇವರ ಆವಾರದಲ್ಲಿ ಹಾಕಿರುವ ಭವ್ಯ ರಂಗಸಜ್ಜಿಕೆಯಲ್ಲಿ ಕಲಾಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ ಇವರಿಂದ
“ಚಂದ್ರಹಾಸ ಚರಿತ್ರೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಎಲ್ಲಾ ಮಹಾಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.